ಪುತ್ತೂರು ಬ್ರಾಹ್ಮಣ ಮಹಾಸಭಾದಿಂದ ಮಹಿಳಾ ದಿನಾಚರಣೆ

ಉಡುಪಿ: ಪುತ್ತೂರು ಬ್ರಾಹ್ಮಣ ಮಹಾಸಭಾದ ವತಿಯಿಂದ ಮಹಿಳಾ ದಿನಾಚರಣೆಯನ್ನು ಭಗವತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಗೃಹದಲ್ಲಿ ಆಚರಿಸಲಾಯಿತು.
ಡಾ.ಶ್ರೀಧರ ಬಾಯಿರಿ ನೇತೃತ್ವದ ದುರ್ಗಾ ಆರೋಗ್ಯ ಘಟಕದ ವತಿಯಿಂದ ಉಚಿತ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಹಂಡೆದಾಸ ಪ್ರತಿಷ್ಠಾನದ ಸಂಸ್ಥಾಪಕಿ ರುಕ್ಮಿಣಿ ಹಂಡೆ ಇವರಿಂದ ಮಹಾಸತಿ ಅನುಸೂಯ ಎಂಬ ವಿಷಯದ ಬಗ್ಗೆ ಹರಿಕಥಾ ಕಾಲಕ್ಷೇಪ ನಡೆಯಿತು.
ಸಾಧಕರಾದ ಕಾಂತಿ ರಾವ್, ಸುಮತಿ ಭಟ್ ಹಾಗೂ ರುಕ್ಮಿಣಿ ಹಂಡೆ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಮಹಿಳಾ ಅಧ್ಯಕ್ಷರಾದ ಸರೋಜಾ ಭಟ್, ನಿರ್ಮಲಾ ಭಟ್ ಕೊಡಂಕೂರು, ಪ್ರಿಯಂವದಾ ಐತಾಳ್ ಹಾಗೂ ಮಾಜಿ ಕಾರ್ಯದರ್ಶಿಗಳಾದ ವೇದಾವತಿ ಭಟ್ ಮತ್ತು ಪದ್ಮಿನಿ ಭಟ್ ಅವರನ್ನು ಗೌರವಿಸಲಾಯಿತು. ಆಪದ್ಬಾಂಧವ ಸಮಿತಿಯ ವತಿಯಿಂದ ಅಶಕ್ತರಿಗೆ ವೈದ್ಯಕೀಯ ವೆಚ್ಚಕ್ಕಾಗಿ ಧನಸಹಾಯವನ್ನು ಯಶೋಧ ಪಿ.ಆರ್. ಹತ್ತಾಂತರಿಸಿದರು.
ಮಹಾಸಭಾದ ಅಧ್ಯಕ್ಷ ಶುಭಾ ಬಾಳ್ತಿಲ್ಲಾಯ ಸ್ವಾಗತಿಸಿದರು. ಪದ್ಮಿನಿ ಭಟ್, ಅನ್ನಪೂರ್ಣ ಉಪ್ಪೂರ, ಜಯಂತಿ ಉಡುಪ, ಸುನೀತಾ ಚೈತನ್ಯ, ಶ್ರೀಲಕ್ಷ್ಮಿ ಸಹಕರಿಸಿದರು. ಆಪತ್ಬಾಂಧವ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಉಡುಪ, ವಿಜಯಕುಮಾರ್ ಉಪಸ್ಥಿತರಿದ್ದರು. ಗೀತಾ ಭಟ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಮಂಜುಳಾ ಪ್ರಸಾದ್ ವಂದಿಸಿದರು.