ಬೈಂದೂರಿನ ಅಜಿನೋರಾದಿಂದ ಕಾರ್ಯಾಗಾರ

ಉಡುಪಿ: ಜರ್ಮನಿಯಲ್ಲಿ ಶಿಕ್ಷಣ ಕಲಿಕೆ ಜೊತೆಜೊತೆಗೆ ಉದ್ಯೋದ ತರಬೇತಿ ಪಡೆಯಲು ಇಚ್ಛಿಸುವ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗಾಗಿ ಬೈಂದೂರಿನ ಅಜಿನೋರಾ ಸಂಸ್ಥೆ ಇದೇ ಮಾ.30ರಂದು ಒಂದು ದಿನದ ಉಚಿತ ವೃತ್ತಿಜೀವನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ ಎಂದು ಅಜಿನೋರಾ ಶಾಖಾ ಮುಖ್ಯಸ್ಥ ಸುಶೀಲ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜರ್ಮನಿಯಲ್ಲಿ ಕಲಿಕೆ, ಬೋಧನಾ ಶುಲ್ಕ ರಹಿತ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳ ಪರಿಚಯವನ್ನು ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಹಾಗೂ ಅವರ ಹೆತ್ತವರಿಗೆ ಈ ಕಾರ್ಯಾಗಾರದಲ್ಲಿ ನೀಡಲಾಗುವುದು ಎಂದವರು ಹೇಳಿದರು.
ಬೈಂದೂರಿನ ಅಜಿನೋರಾ ರಾಜ್ಯದಲ್ಲಿ ಜರ್ಮನಿಯ ಎರಡನೇ ಪರೀಕ್ಷಾ ಕೇಂದ್ರವಾಗಿದೆ ಎಂದ ಅವರು,ಜರ್ಮನಿಗೆ ಉದ್ಯೋಗ ಅಥವಾ ಶಿಕ್ಷಣ ಮುಂದುವರಿಸಲು ತೆರಳುವವರಿಗೆ ಜರ್ಮನ್ ಭಾಷೆಯನ್ನು ಕಲಿಸಲಾಗುತ್ತಿದೆ ಎಂದ ಸುಶೀಲ್ ಕುಮಾರ್, ನಾಳೆ ನಮ್ಮ ಬೈಂದೂರು ಶಾಖೆಯಲ್ಲಿ ನರ್ಸಿಂಗ್ ಕಲಿತ ವಿದ್ಯಾರ್ಥಿಗಳಿಗೆ ಜರ್ಮನಿಯಲ್ಲಿ ಉದ್ಯೋಗದ ಸಲುವಾಗಿ ಜರ್ಮನ್ ಪರೀಕ್ಷಾ ಮಂಡಳಿಯಾದ ಓಯಸ್‌ಡಿ ಸಂಸ್ಥೆ ಪರೀಕ್ಷೆ ನಡೆಸಲಿದೆ ಎಂದರು.
ಜರ್ಮನಿಯಿಂದ ಬರುವ ಅಧಿಕಾರಿಗಳೇ ಈ ಪರೀಕ್ಷೆಯನ್ನು ನಡೆಸಿಕೊ ಡಲಿದ್ದಾರೆ. ಜರ್ಮನಿ ಸೇರಿದಂತೆ ಯುರೋಪಿಯನ್ ದೇಶಗಳಲ್ಲಿ ಭಾರತವೂ ಸೇರಿದಂತೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಉಚಿತ ಅಥವಾ ಕಡಿಮೆ ಖರ್ಚಿನ ವಿದ್ಯಾಭ್ಯಾಸ ಪಡೆಯಲು ಅವಕಾಶವಿದೆ. ಶಿಕ್ಷಣದ ಬಳಿಕ ಅದೇ ಸಂಸ್ಥೆಯಲ್ಲಿ ಉದ್ಯೋಗವೂ ದೊರೆಯಲಿದೆ ಎಂದರು.
ಅಮಲಾ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.