ಡಿ.7ರಂದು ಮೂಳೂರು ಅಲ್ ಇಹ್ಸಾನ್ ಶಾಲಾ ಕಟ್ಟಡದ ಉದ್ಘಾಟನೆ; ವ್ಯಕ್ತಿತ್ವ ವಿಕಸನ ಸಂಗಮ

Update: 2025-04-04 20:24 IST
  • whatsapp icon

ಕಾಪು, ಎ.4: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮಂಗಳೂರು ಇದರ ಅಧೀನ ಸಂಸ್ಥೆಯಾದ ಅಲ್ ಇಹ್ಸಾನ್ ಅಕಾಡೆಮಿ ಸ್ಕೂಲಿನ ಎರಡನೇ ಅಂತಸ್ತಿನ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಮೋಟಿವೇಶನ್ ಸ್ಪೀಕರ್ ಮುನಾವರ್ ಝಮಾ ಅವರಿಂದ ವ್ಯಕ್ತಿತ್ವ ವಿಕಸನ ಭಾಷಣ ನಡೆಯಲಿದೆ.

ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಲಿ ರುವರು. ಡಿಕೆಎಸ್ಸಿ ಕೇಂದ್ರ ಸಮಿತಿ ಅಧ್ಯಕ್ಷ ಅಸ್ಸಯ್ಯಿದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸಿ ದುಆ ನೆರವೇರಿಸಲಿರುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಶಾಲಾ ಕಟ್ಟಡದ ಎರಡನೇ ಅಂತಸ್ತಿನ್ನು ಉದ್ಘಾಟಿಸಲಿರುವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಫಿಝಾ ಗ್ರೂಫ್ ಎಂ.ಡಿ. ಬಿ.ಎಂ.ಫಾರೂಕ್, ಮಾಜಿ ಶಾಸಕ ಮೊಯಿದೀನ್ ಬಾವ, ಯು.ಟಿ. ಇಫ್ತಿಕಾರ್ ಫರೀದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ತ್ ಅಲಿ, ಅಲ್ ಮುಝಯಿನ್ ಗ್ರೂಫ್ ಚರ್ಯಮ್ಯಾನ್ ಝಕರಿಯ ಬಜ್ಪೆ, ಅಲ್ ಮುಝಯಿನ್ ಗ್ರೂಪ್ ಡೈರೆಕ್ಟರ್ ಶರೀಫ್ ಬೋಳಾರ್, ಮುಕ್ಕಾ ಸೀ ಫುಡ್ ಎಂ.ಡಿ. ಹಾರೀಸ್ ಮುಕ್ಕ, ಎಕ್ಸ್ ಟೀಸ್ ಮುಹಮ್ಮದ್ ಅಶ್ರಫ್, ಮುಹಮ್ಮದ್ ಅಶ್ಫಕ್, ಎಎನ್‌ಐ ಟ್ರೇಡಿಂಗ್ ಲತೀಫ್ ಗುರುಪುರ, ಇಮ್ತಿಯಾಝ್ ಉಳ್ಳಾಲ, ರಕ್ವಾನಿ ಕಂಪೆನಿಯ ಇಬ್ರಾಹಿಂ ಹುಸೈನ್, ಮುಶ್ತಾಖ್ ಅಹ್ಮದ್ ಜುಬೈಲ್, ಮುಹಮ್ಮದ್ ಶಬೀರ್ ಜುಬೈಲ್, ಅಬ್ದುಲ್ ರಝ್ಝಾಕ್ ಹುಸೈನ್ ಬ್ಲೂಲೈನ್, ಹೈದರ್ ನೌಷಾದ್ ದುಬೈ, ಅಹ್ಮದ್ ಜುಬೈಲ್, ಶಕೀಲ್ ಅಹ್ಮದ್ ಸಿಈಓ ಮಖವಿ, ಅಬೂಬಕ್ಕರ್ ಮುಹಮ್ಮದ್ ಜುಬೈಲ್, ಅಬ್ದುಲ್ ಶಕೀಲ್ ಚೆಯರ್‌ಮೆನ್ ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್, ಶರೀಫ್ ನ್ಯಾಷನಲ್ ಗೋಲ್ಡ್, ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬೂಬಕ್ಕರ್ ನೇಜಾರ್, ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಬಿಎಸ್‌ಎಫ್ ರಫೀಕ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ಬದ್ರುದ್ದೀನ್ ತೌಫೀಕ್ ಪಿಶರೀಸ್, ಮುಹಮ್ಮದ್ ಇಕ್ಬಾಲ್ ಖತರ್, ಮೂಳೂರು ಜುಮಾ ಮಸೀದ್ ಅಧ್ಯಕ್ಷ ಹಾಜಿ ಅಬೂ ಮುಹಮ್ಮದ್, ಡಿಕೆಎಸ್ಸಿ ಕೇಂದ್ರ ಸಮಿತಿ ಅಧ್ಯಕ್ಷ ಮುಹಮ್ಮದ್ ಸೀದಿ ಹಾಜಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಯು.ಕೆ.ಮುಸ್ತಫಾ ಸಅದಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News