ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ
Update: 2025-04-04 21:58 IST

ಮಲ್ಪೆ, ಎ.4: ಮಲ್ಪೆ ಬಂದರಿನಿಂದ ಸುಮಾರು 25 ನಾಟಿಕಲ್ ದೂರ ಆಳ ಸಮುದ್ರದಲ್ಲಿ ಎ.3ರಂದು ಬೆಳಗ್ಗೆ ಮೀನುಗಾರಿಕೆ ನಡೆಸುತ್ತಿದ್ದ ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರೊಬ್ಬರು ನಾಪತ್ತೆಯಾಗಿ ರುವ ಬಗ್ಗೆ ವರದಿಯಾಗಿದೆ.
ನಾಪತ್ತೆಯಾದವರನ್ನು ಬಿನೋದ್ ಮಜಿ(29) ಎಂದು ಗುರುತಿಸಲಾಗಿದೆ. ಇವರು ಇತರ ಮೀನುಗಾರರ ಜೊತೆ ಎ.2ರಂದು ರಾತ್ರಿ ಮಲ್ಪೆ ಬಂದರಿನಿಂದ ಶ್ರೀಸ್ಕಂದ ವಾಸುಕಿ ಬೋಟಿನಲ್ಲಿ ಮೀನುಗಾರಿಕೆಗೆ ಹೊರಟಿದ್ದರು. ಆಳ ಸಮುದ್ರದಲ್ಲಿ ಮೀನಿನ ಬಲೆ ಎಳೆಯುವಾಗ ಜೋರಾಗಿ ಮಳೆ ಬಂದಿದ್ದು, ಈ ವೇಳೆ ಬಿನೋದ್ ಮಜಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.