60 ಲಕ್ಷ ವೆಚ್ಚದ ಹೆರ್ಗ ರಸ್ತೆ ಅಭಿವೃದ್ಧಿಗೆ ಶಾಸಕರಿಂದ ಚಾಲನೆ

Update: 2025-04-04 22:07 IST
60 ಲಕ್ಷ ವೆಚ್ಚದ ಹೆರ್ಗ ರಸ್ತೆ ಅಭಿವೃದ್ಧಿಗೆ ಶಾಸಕರಿಂದ ಚಾಲನೆ
  • whatsapp icon

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ ಶೆಟ್ಟಿಬೆಟ್ಟು ವಾರ್ಡಿನ ಮಾರುತಿ ನಗರ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಇಂದು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ ಮಾರುತಿ ನಗರದ ನಾಗರಿಕರ ಬೇಡಿಕೆಯ ಮೇರೆಗೆ ನಗರಸಭೆ ವತಿಯಿಂದ 60 ಲಕ್ಷ ರೂ. ಅನುದಾನ ಒದಗಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಶೆಟ್ಟಿಬೆಟ್ಟು ವಾರ್ಡಿನ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭೆ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ನಗರಸಭಾ ಸದಸ್ಯರಾದ ಅಶ್ವಿನಿ ಅರುಣ್, ಸುಮಿತ್ರಾ ನಾಯಕ್, ಹರೀಶ್ ಶೆಟ್ಟಿ ಅಂಬಲ ಪಾಡಿ, ಗಿರಿಧರ ಆಚಾರ್ಯ ಕರಂಬಳ್ಳಿ, ಸ್ಥಳೀಯ ಮುಖಂಡರಾದ ದುರ್ಗಾದಾಸ್ ರೈ, ದಿವಾಕರ ಶೆಟ್ಟಿ, ಅಕ್ಷಿತ್ ಶೆಟ್ಟಿ, ವಾಸುದೇವ ಶೆಣೈ, ಕೃಷ್ಣ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News