ಪಡುಬಿದ್ರಿ ರೈಲು ನಿಲ್ದಾಣದಲ್ಲಿ ಕಾಮಗಾರಿ: ಮಾ.31ರವರೆಗೆ ರೈಲು ಸಂಚಾರ ವ್ಯತ್ಯಯ
ಸಾಂದರ್ಭಿಕ ಚಿತ್ರ
ಉಡುಪಿ: ಕೊಂಕಣ ರೈಲು ಮಾರ್ಗದ ಪಡುಬಿದ್ರಿ ನಿಲ್ದಾಣದಲ್ಲಿ ದುರಸ್ಥಿ ಹಾಗೂ ಇತರ ಕಾಮಗಾರಿಗಳು ನಡೆಯಲಿರುವ ಹಿನ್ನೆಲೆಯಲ್ಲಿ ಮಾ.28ರಿಂದ 31ರವರೆಗೆ ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಮಾ.28 ಶುಕ್ರವಾರ: 1.ರೈಲು ನಂ.10107 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ಮೇಮು ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಮಡಗಾಂವ್ ಜಂಕ್ಷನ್-ಇನ್ನಂಜೆ ನಡುವೆ 50 ನಿಮಿಷ ನಿಲ್ಲಿಸಲಾಗುವುದು. 2.ರೈಲು ನಂ.20646 ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ವಂದೇಭಾರತ್ ಎಕ್ಸ್‌ಪ್ರೆಸ್ ರೈಲನ್ನು ತೋಕೂರು-ನಂದಿಕೂರು ಮಧ್ಯೆ 20 ನಿಮಿಷ ಕಾಲ ನಿಲ್ಲಿಸಲಾಗುವುದು.
ಮಾ.29 ಶನಿವಾರ: 1.ರೈಲು ನಂ.10107 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ಮೇಮು ಎಕ್ಸ್‌ಪ್ರೆಸ್ ರೈಲನ್ನು ಮಡಗಾಂವ್ ಜಂಕ್ಷನ್- ಇನ್ನಂಜೆ ನಿಲ್ದಾಣಗಳ ನಡುವೆ 50 ನಿಮಿಷ ನಿಲ್ಲಿಸಲಾಗುವುದು. 2.ರೈಲು ನಂ.20646 ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ವಂದೇಭಾರತ ಎಕ್ಸ್‌ಪ್ರೆಸ್ ರೈಲನ್ನು ತೋಕೂರು- ನಂದಿಕೂರು ನಿಲ್ದಾಣಗಳ ನಡುವೆ 20 ನಿಮಿಷ ವಿಳಂಬಗೊಳಿಸಲಾಗುವುದು.
ಮಾ.30 ರವಿವಾರ: ರೈಲು ನಂ.20646 ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ವಂದೇಭಾರತ್ ಎಕ್ಸ್‌ಪ್ರೆಸ್ ರೈಲನ್ನು ತೋಕೂರು- ನಂದಿಕೂರು ನಿಲ್ದಾಣಗಳ ನಡುವೆ 20 ನಿಮಿಷ ವಿಳಂಬಗೊಳಿಸಲಾಗುವುದು.
ಮಾ.31 ಸೋಮವಾರ: 1.ರೈಲು ನಂ.10107 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ಮೇಮು ಎಕ್ಸ್‌ಪ್ರೆಸ್ ರೈಲನ್ನು ಮಡಗಾಂವ್ ಜಂಕ್ಷನ್- ಇನ್ನಂಜೆ ನಿಲ್ದಾಣಗಳ ನಡುವೆ 50 ನಿಮಿಷ ನಿಲ್ಲಿಸಲಾಗುವುದು. 2.ರೈಲು ನಂ.20646 ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ವಂದೇಭಾರತ ಎಕ್ಸ್‌ಪ್ರೆಸ್ ರೈಲನ್ನು ತೋಕೂರು- ನಂದಿಕೂರು ನಿಲ್ದಾಣಗಳ ನಡುವೆ 20 ನಿಮಿಷ ವಿಳಂಬಗೊಳಿಸಲಾಗುವುದು.