ಭಟ್ಕಳ: ಜ.7ರಂದು ರಾಜ್ಯಮಟ್ಟದ ಕರಾಟೆ ಸ್ಪರ್ಧೆ
ಭಟ್ಕಳ: ಉತ್ತರ ಕನ್ನಡ ಕರಾಟೆ ಶಿಕ್ಷಕರ ಮತ್ತು ಕ್ರೀಡಾ ಸಂಘ ಹಾಗೂ ಯಿನ್ ಯ್ಯಾಂಗ್ ಇಂಟರ್ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಕರಾಟೆ ಡೊ ಇಂಡಿಯಾ ಇವರ ಸಂಯುಕ್ತಾಶ್ರಯದಲ್ಲಿ ಜನವರಿ 7 ರಂದು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ಮಾವಿನಕಟ್ಟೆಯ ಮಂಜುನಾಥ ರಾಯಲ್ ಕನ್ವೆನ್ಸನ್ ಹಾಲ್ ನಲ್ಲಿ ನಡೆಯಲಿದೆ ಎಂದು ಇನ್ ಯ್ಯಾಂಗ್ ಇಂಟರ್ನ್ಯಾಷನಲ್ ಮಾರ್ಷಲ್ ಆರ್ಟ್ಸ್ ನ ನಾಗರಾಜ ದೇವಾಡಿಗ ತಿಳಿಸಿದ್ದಾರೆ.
ಭಟ್ಕಳದ ನಾಗಶ್ರೀ ಮಾರ್ಷಲ್ ಆರ್ಟ್ಸ್ ಕರಾಟೆ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾವಿನಕಟ್ಟೆಯ ಮಂಜುನಾಥ ರಾಯಲ್ ಕನ್ವೆನ್ಸನ್ ಹಾಲ್ ನಲ್ಲಿ ನಡೆಯುವ ಕರಾಟೆ ಪಂದ್ಯಾವಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 800 ಕ್ಕೂ ಹೆಚ್ಚು ಸ್ಪರ್ಧಾಳುಗಳು ಆಗಮಿಸುತ್ತಿದ್ದು ಹುಡುಗರು ಮತ್ತು ಹುಡುಗಿಯರ ವಿಭಾಗದಲ್ಲಿ ವಿದ್ಯಾರ್ಥಿಗಳ ಎತ್ತರ, ತೂಕ, ಹೊಂದಿರುವ ಬೆಲ್ಸ್ ಆಧರಿಸಿ ಪಂದ್ಯಾಟವನ್ನು ನಡೆಸಲಾಗುತ್ತದೆ. ಗೆದ್ದ ವಿದ್ಯಾರ್ಥಿಗಳಿಗೆ ಆಕರ್ಷಕ ಟ್ರೋಪಿ ಹಾಗೂ ಗೌರವ ಮೊತ್ತವನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ ಅವರು, ಕಾರ್ಯಕ್ರಮವನ್ನು ಸಚಿವ ಮಾಂಕಾಳ್ ವೈದ್ಯ ಉದ್ಘಾಟಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬುಡೊಕಾನ್ ಕರಾಟೆ ತರಬೇತಿ ಸಂಸ್ಥೆಯ ತರಬೇತುದಾರ ಪ್ರವೀಣ, ಶೋಟೋಕಾನ ಕರಾಟೆ ತರಬೇತಿ ಸಂಸ್ಥೆಯ ಸದಸ್ಯ ಅಶೋಕ ನಾರಯಣ ನಾಯ್ಕ ಶೋಟೋಕಾನ್ ಕರಾಟೆ ತರಬೇತಿ ಸಂಸ್ಥೆ ಕಾರ್ಯದರ್ಶಿ ವೆಂಕಟೇಶ, ಈಶ್ವರ ನಾಯ್ಕ ಮತ್ತಿತರರು ಇದ್ದರು.