ಭಟ್ಕಳದಲ್ಲಿ ಚುನಾವಣೆ: ಶೇ. 76 ಮತದಾನ

Update: 2024-05-07 16:51 GMT

ಭಟ್ಕಳ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಮಂಗಳವಾರದಂದು ಚುನಾವಣೆ ನಡೆದಿದ್ದು ಶೆ.76 ಮತದಾನ ದಾಖಲಾಗಿದೆ ಎಂದು ವರದಿಯಾಗಿದೆ.

ಮಂಗಳವಾರ ಬೆಳಗ್ಗೆ ಇಂದಲೇ ಅತ್ಯಂತ ಬಿರುಸಿನಿಂದ ಆರಂಭಗೊಂಡ ಮತದಾನವು ಸಂಜೆ ಆರು ಗಂಟೆವರೆಗೂ ಬಿರುಸಿನಿಂದಲೇ ಸಾಗಿತು. ಉರಿ ಬಿಸಿಲಿನಲ್ಲಿ ಮಹಿಳೆಯರು ಅತ್ಯಂತ ಉತ್ಸಾಹದಿಂದ ಮತದಾನಕ್ಕಾಗಿ ಸರತಿ ಯಲ್ಲಿ ನಿಂತು ಕೊಂಡಿರುವುದು ಕಂಡುಬಂತು. ನಗರ ವ್ಯಾಪ್ತಿಯಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾ ಗಿದೆ. ಹೇಬಳೆ ಪಂಚಾಯತ್ ನ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಸುಮಾರು 100 ಮೀಟರ್ ವರೆಗೂ ಮಹಿಳೆಯರು ಹಾಗೂ ಪುರುಷರು ಸರ್ತಿಯಲ್ಲಿ ನಿಂತಿರುವುದು ಕಂಡುಬಂತು.

ಸ್ಥಳೀಯ ಯುವಕ ಸಂಘಗಳು ಆಯಾಯ ಮತಗಟ್ಟೆಯಲ್ಲಿ ಮತದಾರರಿಗೆ ತಂಪು ಪಾನೀಯ ವಿತರಿಸುತ್ತಿರುವುದು ವಿಶೇಷವಾಗಿತ್ತು. ತಾಲೂಕಿನಲ್ಲಿ ಎಲ್ಲಿಯೂ ಯಾವುದೇ ಅನಾಹುತ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಒಂದೆರಡು ಮತಗಟ್ಟೆಯಲ್ಲಿ ಮತದಾನದ ಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾನ ವಿಧಾನಗತಿಯಲ್ಲಿ ಸಾಗಿದ್ದು ಮತದಾರರ ಆಕ್ರೋಶಕ್ಕೆ ಕಾರಣವಾಯಿತು.







Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News