ಎ.12 -13ರಂದು ಎಐಟಿಎಂ ಕೋಡ್ ಫೆಸ್ಟ್ 2025: ರಾಷ್ಟ್ರೀಯ ಮಟ್ಟದ ಹ್ಯಾಕಥಾನ್‌ ಸ್ಪರ್ಧೆ

Update: 2025-04-09 18:39 IST
ಎ.12 -13ರಂದು ಎಐಟಿಎಂ ಕೋಡ್ ಫೆಸ್ಟ್ 2025: ರಾಷ್ಟ್ರೀಯ ಮಟ್ಟದ ಹ್ಯಾಕಥಾನ್‌ ಸ್ಪರ್ಧೆ
  • whatsapp icon

ಭಟ್ಕಳ: ಅಂಜುಮನ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಎ.12 ಮತ್ತು 13 ರಂದು ಆಯೋಜಿಸಲಾಗಿರುವ ಎಐಟಿಎಂ ಕೋಡ್ ಫೆಸ್ಟ್ 2025 ರಾಷ್ಟ್ರೀಯ ಮಟ್ಟದ ಹ್ಯಾಕಥಾನ್‌ಗೆ ಸಕಲ ಸಿದ್ಧತೆಗಳು ನಡೆದಿದ್ದು ಭಾರತಾದ್ಯಂತ ನೂರಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಅಂಜುಮನ್ ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲ ಕೆ. ಫಝಲುರ್ರಹ್ಮಾನ್ ಮಾಹಿತಿ ನೀಡಿದರು.

ಹ್ಯಾಕಥಾನ್ ಎಂಬುದು ಒಂದು ಸಮಯ-ನಿರ್ಬಂಧಿತ ಸ್ಪರ್ಧೆಯಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು ಮತ್ತು ತಂತ್ರಜ್ಞಾನ ಉತ್ಸಾಹಿಗಳು ತಂಡದಲ್ಲಿ ಸೇರಿ ನವೀನ ಪರಿಹಾರಗಳನ್ನು ರೂಪಿಸುತ್ತಾರೆ. ಇದು ಸೃಜನ ಶೀಲತೆ, ಸಹಕಾರ ಮತ್ತು ಸಮಸ್ಯೆ ಪರಿಹಾರಕ್ಕೆ ಒತ್ತು ನೀಡುವ ವೇದಿಕೆಯಾಗಿದೆ ಎಂದರು.

ಫೆ. 22 ಮತ್ತು 23 ರಂದು ನಡೆದ ಆನ್‌ಲೈನ್ ಹ್ಯಾಕಥಾನ್ ಸ್ಪರ್ಧೆಯಲ್ಲಿ 100 ತಂಡಗಳು ಆಯ್ಕೆಯಾ ಗಿದ್ದು, ಎ. ಎ.12 ಮತ್ತು 13 ರಂದು ಆಫ್‌ಲೈನ್ ಹ್ಯಾಕಥಾನ್ - ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ರೂ. 60,000, ದ್ವಿತೀಯ ಸ್ಥಾನ: ರೂ. 30,000, ತೃತೀಯ ಸ್ಥಾನ: ರೂ. 15,000, ಒಟ್ಟು ರೂ. 2,00,000 ಮೌಲ್ಯದ ನಗದು ಬಹುಮಾನಗಳು ನೀಡಲಿದ್ದೇವೆ. ಮೊದಲ 10 ತಂಡಗಳಿಗೆ ವಿಶೇಷ ಉಡುಗೊರೆಗಳು ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು.

ಟೈಟಲ್ ಪಾರ್ಟ್‌ನರ್: ನಿವಿಯಸ್ ಸೊಲ್ಯೂಷನ್ಸ್ (ಮಂಗಳೂರು) , ಆಯೋಜಕ ಪಾರ್ಟ್‌ನರ್: ಡಿಜಿಸ್ಕ್ರಿಪ್ಟ್ ಟೆಕ್ನಾಲಜೀಸ್ (ಸಿರ್ಸಿ) ಹ್ಯಾಕಥಾನ್ ಕಾರ್ಯಕ್ರಮವನ್ನು ಪ್ರಯೋಜಿಸಿದ್ದಾರೆ. ಐಟೆಕ್ಜ್ ಸೊಲ್ಯೂಷನ್ಸ್ (ಮೆಲ್ಬರ್ನ್, ಆಸ್ಟ್ರೇಲಿಯಾ), ಸ್ಪ್ರೌಟ್‌ಎಕ್ಸ್‌ಪಿ (ಭಟ್ಕಳ), ಮೊಹ್ತಿಶಾಮ್ (ಭಟ್ಕಳ), ತಹೂರಾ (ಸಿರ್ಸಿ), ಎಮರ್ಟ್‌ಕ್ಸ್ (ಮಂಗಳೂರು), ವೈನ್‌ಟೀಮ್ ಗ್ಲೋಬಲ್ (ಮಂಗಳೂರು) ಸಹಪ್ರಯೋಜಕವಾಗಿದ್ದಾರೆ

ಪತ್ರಿಕಾಗೋಷ್ಠಿಯಲ್ಲಿ ಎಚ್‌ಒಡಿ (ಕಂಪ್ಯೂಟರ್ ಸೈನ್ಸ್) ಡಾ. ಅನ್ವರ್, ಪ್ರೊ. ನೂರೈನ್ ಹಾಗೂ ವಿದ್ಯಾರ್ಥಿ ಸಂಯೋಜಕರಾದ ಫಾರ್ಖಲಿದ್ ರಿದಾ ಮಾನ್ವಿ, ನವೀದ್ ಮತ್ತು ಸಮಾನ್ ಉಪಸ್ಥಿತರಿದ್ದರು. ಈ ಹ್ಯಾಕಥಾನ್ ಯುವ ಪ್ರತಿಭೆಗಳಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮಿಂಚುವ ಅವಕಾಶವನ್ನು ಒದಗಿಸಲಿದೆ ಎಂದು ಡಾ. ಫಝಲುರ್‌ರಹ್ಮಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News