ಭಟ್ಕಳದ AITM ಕೋಡ್‌ಫೆಸ್ಟ್ 2025; ರಾಷ್ಟ್ರೀಯ ಹ್ಯಾಕಥಾನ್

ಭಟ್ಕಳ: ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (AITM), ಭಟ್ಕಳದಲ್ಲಿ ಆಯೋಜಿಸಲಾದ 24 ಗಂಟೆಗಳ ರಾಷ್ಟ್ರೀಯ ಮಟ್ಟದ AITM ಕೋಡ್‌ಫೆಸ್ಟ್ 2025 ಹ್ಯಾಕಥಾನ್, ನಾವೀನ್ಯತೆ, ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ್ಯದ ಅದ್ಭುತ ಪ್ರದರ್ಶನದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ದೇಶಾದ್ಯಂತದ 30 ತಂಡಗಳು ಭಾಗವಹಿಸಿದ್ದವು.
ಸಮಾರೋಪ ಸಮಾರಂಭದಲ್ಲಿ AITMನ ಪ್ರಾಂಶುಪಾಲ ಡಾ. ಕೆ. ಫಝ್ಲುರ್ ರೆಹಮಾನ್ ವಿಜೇತರನ್ನು ಘೋಷಿಸಿದರು. 2 ಲಕ್ಷ ರೂ. ಮೌಲ್ಯದ ಬಹುಮಾನಗಳನ್ನು ವಿತರಿಸಲಾಯಿತು. ಮೊದಲ ಬಹುಮಾನ 60 ಸಾವಿರ ವನ್ನು ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಂಗಳೂರಿನ ಕ್ರ್ಯಾಶ್‌ಮ್ಯಾಕ್ಸ್ ತಂಡದ ಅಬುಲ್ ಖೈರ್ ಪಡೆದರು. ದ್ವಿತೀಯ ಬಹುಮಾನ 30ಸಾವಿರ ವನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್, ಮೈಸೂರಿನ ಸೈಫರ್ನೋವಾ ತಂಡದ ಹೇಮಂತ್ ಸಿ.ಎಸ್. ಮತ್ತು ಮೊಹಮ್ಮದ್ ಕಮ್ರಾನ್ ಗಳಿಸಿದರು. ತೃತೀಯ ಬಹುಮಾನ 15ಸಾವಿರ ಜಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದಾವಣಗೆರೆಯ ಹಸ್ಲರ್ಸ್.ದೇವ್ ತಂಡದ ಅಹಮದ್ ಅಲಿ ಝಡ್, ಸೈಯದ್ ಇಯಾನುಲ್ಲಾ ಮತ್ತು ಎಸ್. ತೇಜಸ್ ಪಡೆದರು. ಇದರ ಜೊತೆಗೆ, ಟಾಪ್ 10 ತಂಡಗಳಿಗೆ ವಿಶೇಷ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ತೀರ್ಪುಗಾರರಾಗಿ AITMನ ಹಳೆಯ ವಿದ್ಯಾರ್ಥಿಗಳು, ನೀವಿಯಸ್ ಸೊಲ್ಯೂಷನ್ಸ್ ಸಂಸ್ಥಾಪಕ ಮೊಹ್ಸಿನ್ ಖಾನ್, ಎಮರ್ಟೆಕ್ಸ್ ಇನ್ಫಾರ್ಮೇಷನ್ ಟೆಕ್ನಾಲಜೀಸ್‌ನ ತಂತ್ರಜ್ಞಾನ ಮುಖ್ಯಸ್ಥ ಮುಬೀನ್ ಜುಕಾಕು, ವಿನ್‌ಟೀಮ್ ಗ್ಲೋಬಲ್ ಸಂಸ್ಥಾಪಕ ವಸೀಮ್ ಅಹ್ಮದ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಜೆ. ಅನ್ವರ್ ಶಾಥಿಕ್ ಮತ್ತು ಪ್ರಾಧ್ಯಾಪಕ ಡಾ. ಡೇನಿಯಲ್ ಫ್ರಾನ್ಸಿಸ್ ಕಾರ್ಯನಿರ್ವಹಿಸಿದರು.
ರಿಜಿಸ್ಟ್ರಾರ್ ಪ್ರೊ. ಝಾಹಿದ್ ಖರುರಿ ಸ್ವಾಗತಿಸಿದರು. AITMನ ಕಾರ್ಯದರ್ಶಿ ಮೊಹಿದ್ದೀನ್ ರುಕ್ನದ್ದೀನ್ ಕಾರ್ಯಕ್ರಮದ ಯಶಸ್ಸಿಗೆ ಸಂತೋಷ ವ್ಯಕ್ತಪಡಿಸಿ, ಸಂಘಟಕರ ಪ್ರಯತ್ನವನ್ನು ಶ್ಲಾಘಿಸಿದರು. ಸಂಯೋಜಕ ಫಾರ್ಖಲಿತ್ ರಿದಾ ಮಾನ್ವಿ ಧನ್ಯವಾದ ಸಮರ್ಪಿಸಿದರು.
AITM ಕೋಡ್‌ಫೆಸ್ಟ್ 2025 ಯುವ ತಂತ್ರಜ್ಞರಿಗೆ ಕೌಶಲ್ಯ ಪ್ರದರ್ಶನ, ಉದ್ಯಮ ತಜ್ಞರಿಂದ ಮಾರ್ಗ ದರ್ಶನ ಮತ್ತು ಸಹಕಾರದ ನಾವೀನ್ಯತೆಗೆ ಒಂದು ಅತ್ಯುತ್ತಮ ವೇದಿಕೆಯಾಗಿ ಗುರುತಿಸಲ್ಪಟ್ಟಿತು.
ಶೀರ್ಷಿಕೆ ಪಾಲುದಾರರಾಗಿ ನಿವಿಯಸ್ ಸೊಲ್ಯೂಷನ್ಸ್, ಸಂಘಟನಾ ಪಾಲುದಾರರಾಗಿ ಡಿಜಿಸ್ಕ್ರಿಪ್ಟ್ ಟೆಕ್ನಾಲಜೀಸ್, ಸಹ ಪಾಲುದಾರರಾಗಿ ಮೊಹ್ತಿಶಮ್ ಬಿಲ್ಡರ್ಸ್, ಸ್ಪ್ರೌಟ್‌ಎಕ್ಸ್‌ಪಿ, ಐಟೆಕ್ಸ್ ಸೊಲ್ಯೂಷನ್ಸ್, ಎಮರ್ಟ್‌ಕ್ಸ್ ಟೆಕ್ನಾಲಜೀಸ್, ತಹೂರ ಮತ್ತು ವಿನ್‌ಟೀಮ್ ಗ್ಲೋಬಲ್ ಕಾರ್ಯಕ್ರಮಕ್ಕೆ ಬೆಂಬಲ ನೀಡಿದವು.