ಭಟ್ಕಳ: ಪ್ರವಾದಿ ಜನ್ಮದಿನಾಚರಣೆ ಅಂಗವಾಗಿ ನಾತ್, ರಸಪ್ರಶ್ನೆ ಸ್ಪೆರ್ಧೆ

Update: 2024-09-27 06:19 GMT

ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮ ತಿಂಗಳು ರಬೀಉಲ್ ಅವ್ವಲ್ ನಿಮಿತ್ತ ಭಟ್ಕಳದ ಮಜ್ಲಿಸ್ ಇಸ್ಲಾಹ್ ವ ತಂಝೀಮ್ ಸಂಸ್ಥೆ ಆಯೋಜಿಸಿದ ಪ್ರವಾದಿಯವರ ಜೀವನ ಮತ್ತು ಸಂದೇಶಗಳನ್ನು ಬಿಂಬಿಸುವ ಸ್ತುತಿಗೀತೆ(ನಾತ್ ) ಮತ್ತು ರಸಪ್ರಶ್ನೆ ಸ್ಪರ್ಧೆಯು ಗುರುವಾರ ರಾತ್ರಿ ಆಮಿನಾ ಪ್ಯಾಲೇಸ್ ನಲ್ಲಿ ನಡೆಯಿತು.

ಈ ಸ್ಪರ್ಧೆಯಲ್ಲಿ ಭಟ್ಕಳದ ವಿವಿಧ ಶಾಲಾ ಕಾಲೇಜುಗಳ ಮತ್ತು ಮದರಸಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ರಸ ಪ್ರಶ್ನೆ ಸ್ಪರ್ಧೆಯಲ್ಲಿ ಜಾಮಿಯಾ ಇಸ್ಲಾಮಿಯ ಶಿಕ್ಷಣ ಸಂಸ್ಥೆಯ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ನ್ಯೂ ಶಮ್ಸ್ ಸ್ಕೂಲ್ ತಂಡವು ದ್ವಿತೀಯ ಸ್ಥಾನ ಹಾಗೂ ಅಂಜುಮನ್ ಬಾಲಕರ ಪ್ರೌಢಶಾಲಾ ತಂಡವು ತೃತೀಯ ಸ್ಥಾನವನ್ನು ಪಡೆದುಕೊಂಡಿತು.

ನಾತ್ (ಸ್ತುತಿಗೀತೆ) ಸ್ಪರ್ಧೆಯಲ್ಲಿ ಮದ್ರಸ ಖೈರುಲ್ ಉಲೂಮ್‌ನ ಮುಹಮ್ಮದ್ ಸಾಬಿತ್ ಇಬ್ನ್ ಅಬ್ದುಲ್ ಶುಕೂರ್ ಅಸ್ಕರಿ ಪ್ರಥಮ, ಅಂಜುಮನ್ ಕಾಲೇಜಿನ ಮುಹಮ್ಮದ್ ಅಲಿ ಶಾದ್ ಅರ್ಮಾರ್ ದ್ವಿತೀಯ, ನೌನಿಹಾಲ್ ಸೆಂಟ್ರಲ್ ಶಾಲೆಯ ನಾಯಿಫ್ ಅಹ್ಮದ್ ಜುಕಾಕು ತೃತೀಯ ಬಹುಮಾನ ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಜ್ಲಿಸ್ ಇಸ್ಲಾಹ್ -ವ-ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ವಹಿಸಿದ್ದರು, ಉಪಾಧ್ಯಕ್ಷ ಅತೀಕುರ್ರಹ್ಮಾನ್ ಮುನೀರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ ನದ್ವಿ,  ಭಟ್ಕಳ ಪುರಸಭೆ ಉಪಾಧ್ಯಕ್ಷ ಮುಹಿದ್ದೀನ್ ಅಲ್ತಾಫ್ ಖರೂರಿ, ಜಾಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಇಮ್ರಾನ್ ಲಂಕಾ, ಸೇರಿದಂತೆ ತಂಝೀಮ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅತೀಕುರ್ರಹ್ಮಾನ್ ಶಾಬಂದ್ರಿ ರಸಪ್ರಶ್ನೆ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News