ಭಟ್ಕಳ: KUD ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್‌ ಗಳಿಸಿದ ಅಂಜುಮನ್ ಕಾಲೇಜಿನ ವಿದ್ಯಾರ್ಥಿನಿಯರು

Update: 2023-08-23 08:02 GMT

ಭಟ್ಕಳ: ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ (ಕೆಯುಡಿ) ನಡೆಸಿದ ವಾರ್ಷಿಕ ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಕಂಪ್ಯೂಟರ್ ಅಪ್ಲಿಕೇಷನ್ (ಎಐಎಂಸಿಎ) ವಿದ್ಯಾರ್ಥಿನಿಯರು ಉತ್ತಮ ರ‍್ಯಾಂಕ್‌ ಗಳಿಸಿದ್ದಾರೆ.

ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (BBA) ಸ್ಟ್ರೀಮ್‌ನಲ್ಲಿ ಆಯಿಷಾ ರುಫಿ D/o ಜಮೀಲ್ ಹುಸೇನ್ ಫಕರ್ದೆ 94.95% ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್, ವಸೀರಾ D/o ಅಬ್ದುಲ್ ಜಬ್ಬಾರ್ ಶಿಂಗಟಿ 91.69 % ಅಂಕಗಳೊಂದಿಗೆ ಎಂಟನೇ ರ‍್ಯಾಂಕ್‌, ಐಫಾ D/o ಹಬೀಬಿಲ್ಲಾ ಸಿದ್ದಿಬಾಪ 91.67% ಅಂಕಗಳೊಂದಿಗೆ ಒಂಬತ್ತನೇ ರ‍್ಯಾಂಕ್‌ ಗಳಿಸಿದ್ದಾರೆ ಎಂದು ಎಐಎಂಸಿಎ ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಜುಮನ್ ಹಮೀ-ಇ-ಮುಸ್ಲಿಮೀನ್ ಅಧ್ಯಕ್ಷ ಕಾಜಿಯಾ ಮುಝಮ್ಮಿಲ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಿದ್ದೀಕ್ ಪ್ರಾಂಶುಪಾಲ ಮೊಹಮ್ಮದ್ ಮೊಹ್ಸಿನ್ ಮತ್ತು ಇತರ ಸಿಬ್ಬಂದಿ ವರ್ಗದವರು ರ‍್ಯಾಂಕ್‌ ಪಡೆದ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News