ಉ.ಕ. ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ: ಮುರುಡೇಶ್ವರದ ಆಶಾ ಸಿರಿಲ್ ಡಿ’ಸೋಜಾ ಪ್ರಥಮ, ಭಟ್ಕಳದ ಕೀರ್ತಿ ನಾಯ್ಕ ದ್ವಿತೀಯಾ
ಭಟ್ಕಳ: ಸಮಾನತೆ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್(ಸ) ರಾಜ್ಯ ವ್ಯಾಪಿ ಅಭಿಯಾನದ ಅಂಗವಾಗಿ ಭಟ್ಕಳದ ಜಮಾಅತೆ ಇಸ್ಲಾಮೀ ಹಿಂದ್ ಭಟ್ಕಳ ಶಾಖೆಯು ಆಯೋಜಿಸಿದ್ದ ಉ.ಕ ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಫಲಿತಾಂಶ ಪ್ರಕಟಗೊಂಡಿದ್ದು, ಶ್ರೀ ಗುರುಸುಧೀಂದರ ಕಾಲೇಜಿನ ಉಪನ್ಯಾಸಕಿ ಆಶಾ ಸಿರಿಲ್ ಡಿ’ಸೋಜಾ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ನ್ಯೂ ಶಮ್ಸ್ ಸ್ಕೂಲ್ ನ ಶಿಕ್ಷಕಿ ಕೀರ್ತಿ ನಾರಾಯಣ ನಾಯ್ಕ ದ್ವಿತೀಯ ಸ್ಥಾನ ಹಾಗೂ ಕುಮಟಾದ ಶೀತಲ್ ಅಶೋಕ ಭಂಡಾರಿ ತೃತೀಯ ಸ್ಥಾನ ಪಡೆದುಕೊಂಡಿದ್ದು ಕ್ರಮವಾಗಿ ರೂ.5000, 3000, 2000 ಹಾಗೂ ಪ್ರಶಸ್ತಿ ಪತ್ರ ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ಪ್ರೀಯಾಂಕ್ ವೆಂಕಟೇಶ ಗೌಡ ಹೊನ್ನಾವರ, ಮಂಜುನಾಥ್ ಹೆಬ್ಬಾರ್ ಕೋಟಖಂಡ, ಜಯಲಕ್ಷ್ಮೀ ಅಂಕೋಲಾ, ವಿನಾಯಕ ರಮೇಶ್ ನಾಯ್ಕ ಕುಮಟಾ, ಆಫ್ರೀನ್ ಯಾಕೂಬ್ ಶೇಖ್ ಭಟ್ಕಳ, ಸಾವಿತ್ರಿ ಗಣಪತಿ ಆಚಾರ್ ಮರಾಠಿಕೊಪ್ಪ ಬರೆದ ಪ್ರಬಂಧಗಳು ನಿರ್ಣಯಕರ ಮೆಚ್ಚುಗೆಯನ್ನು ಗಳಿಸಿದ್ದು ತಲಾ ರೂ.500 ನಗದು ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪ್ರತ್ರಕ್ಕೆ ಬಾಜನರಾಗಿದ್ದಾರೆ ಎಂದು ಪ್ರಬಂಧ ಸ್ಪರ್ಧೆಯ ಸಂಚಾಲಕ ಎಂ.ಆರ್.ಮಾನ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧೆಯ ವಿಜೇತರಿಗೆ ನ.3 ರಂದು ಸಂಜೆ ಭಟ್ಕಳದ ಅನ್ಫಾಲ್ ಸೂಪರ್ ಮಾರ್ಕೇಟ್ ಬಳಿಯ ಆಮಿನಾ ಪ್ಯಾಲೇಸ್ ನಲ್ಲಿ ನಡೆಯುವ “ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್(ಸ) ವಿಚಾರಗೋಷ್ಟಿ ಹಾಗೂ ಪ್ರಸಿದ್ಧ ಸಾಹಿತಿ ಯೋಗೇಶ್ ಮಾಸ್ಟರ್ ವಿರಚಿತ “ನನ್ನ ಅರಿವಿನ ಪ್ರವಾದಿ” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಉ.ಕ.ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ಎಸ್.ವೈದ್ಯ ಬಹುಮಾನ ವಿತರಣೆ ಮಾಡಲಿದ್ದಾರೆ. ಈ ವಿಚಾರಗೋಷ್ಟಿಯಲ್ಲಿ ಕರಾವಳಿ ಮುಂಜಾವು ಪತ್ರಿಕೆಯ ಪ್ರಧಾನ ಸಂಪಾದಕ ಗಂಗಾಧರ್ ಹಿರೇಗುತ್ತಿ, ಸಾಹಿತಿ ಯೋಗೇಶ್ ಮಾಸ್ಟರ್ ಬೆಂಗಳೂರು ಹಾಗೂ ಪ್ರೋ.ಆರ್.ಎಸ್.ನಾಯಕ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಆತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಕನ್ನಡದ ಖ್ಯಾತ ಪ್ರವಚನಕಾರ ಮುಹಮ್ಮದ್ ಕುಂಞಿ ಮಂಗಳೂರು ವಹಿಸಲಿದ್ದಾರೆ.
ಮಾಜಿ ಶಾಸಕ ಜಿ.ಡಿ.ನಾಯ್ಕ, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಸದ್ಭಾವನಾ ಮಂಚ್ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಸತೀಶ್ ಕುಮಾರ್ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ್ ನಾಯ್ಕ, ಸದ್ಭಾವನಾ ಸೇವಾಶ್ರಿ ಪ್ರಶಸ್ತಿ ಪುರಸ್ಕೃತೆ ಡಾ.ಸವಿತಾ ಕಾಮತ್, ಜಮಾಅತೆ ಇಸ್ಲಾಮಿ ಹಿಂದ ಮಂಗಳೂರು ವಲಯ ಸಂಚಾಲಕ ಮುಹಮ್ಮದ್ ಇಸ್ಮಾಯಿಲ್, ಉ.ಕ.ಜಿಲ್ಲಾ ಸಂಚಾಲಕ ಅಬ್ದುಲ್ ಮನ್ನಾನ್ ಶಿರಸಿ ಇವರ ಗೌರವ ಉಪಸ್ಥಿತಿ ಯಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಫರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದು ಈ ಕಾರ್ಯಕ್ರಮದ ನಂತರ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಸರ್ವಧರ್ಮಿಯ ಸ್ತ್ರೀ ಪುರುಷರು ತಮ್ಮ ಕುಟುಂಬ ಸಮೇತ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಎಂ.ಆರ್.ಮಾನ್ವಿ ಮನವಿ ಮಾಡಿಕೊಂಡಿದ್ದಾರೆ.