ಹೊನ್ನಾವರ: ಆ್ಯಂಬುಲೆನ್ಸ್ ಪಲ್ಟಿ; ರೋಗಿ, ಚಾಲಕನಿಗೆ ಗಾಯ

Update: 2024-06-30 04:28 GMT

ಹೊನ್ನಾವರ: ರೋಗಿಯೊಬ್ಬರನ್ನ ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ವಾಹನ ಪಲ್ಟಿಯಾದ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ  ಹೊಸಪಟ್ಟಣ ಕ್ರಾಸ್ ಹತ್ತಿರ ನಡೆದಿದೆ.

ಕುಮಟಾ ಕೆನರಾ ಹೆಲ್ತ್‌ಕೇರ್‌ ನಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ಪಾರ್ಶ್ವವಾಯುವಿಗೆ ತುತ್ತಾದ ರೋಗಿಯೊಬ್ಬರನ್ನು ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಂಬುಲೆನ್ಸ್ ಪಲ್ಟಿಯಾಗಿದೆ.

ವಾಹನದಲ್ಲಿ ಒಟ್ಟು ನಾಲ್ವರಿದ್ದರು. ಅಪಘಾತದ ಪರಿಣಾಮವಾಗಿ ಪಾರ್ಶ್ವವಾಯುವಿಗೆ ತುತ್ತಾದ ಕಮಲಾ ಪಟಗಾರ ಹಾಗೂ ಅಂಬುಲೆನ್ಸ್ ಚಾಲಕ ಸೋಮನಾಥ ನಾಯ್ಕ ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

 ಘಟನೆ ಬಳಿಕ ರೋಗಿ ಹಾಗೂ ರೋಗಿಯ ಸಂಬಂಧಿಕರನ್ನು ಬೇರೆ ಆ್ಯಂಬುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ. ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News