ಕಾರವಾರ: ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನನ್ನು ಉಪಚರಿಸಿದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

Update: 2024-04-27 10:56 IST
  • whatsapp icon

ಕಾರವಾರ:ಯಲ್ಲಾಪುರ ತಾಲೂಕಿನ‌ ಹೆದ್ದಾರಿಯಲ್ಲಿ ಸ್ಕಿಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರನನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿ, ತಾವೇ  ಖುದ್ದು ವೈದ್ಯೋಪಚಾರ  ನೀಡುವ ಮೂಲಕ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾನವೀಯತೆ ಮೆರೆದಿದ್ದಾರೆ.

ಹಳಿಯಾಳದಲ್ಲಿ ಪ್ರಚಾರ ಕಾರ್ಯ ಮುಗಿಸಿ ರಾತ್ರಿ ಶಿರಸಿಗೆ ತೆರಳುವ ಸಂದರ್ಭದಲ್ಲಿ ಯಲ್ಲಾಪುರ- ಶಿರಸಿ ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಸವಾರ ವಿನಾಯಕ ಶೆಟ್ಟರ್ ಎಂಬಾತ ರಸ್ತೆಯಲ್ಲೇ‌ ಗಾಯದ ನೋವಿನಿಂದಾಗಿ ಪ್ರಜ್ಞೆ ತಪ್ಪಿದ್ದ. ರಸ್ತೆ ಬದಿಯಲ್ಲಿ ವ್ಯಕ್ತಿ ಬಿದ್ದಿರುವುದನ್ನ ಕಂಡು ಕಾರು‌ ನಿಲ್ಲಿಸಿದ ಡಾ.ಅಂಜಲಿ, ಗಾಯಾಳುವನ್ನ ಪರೀಕ್ಷಿಸಿ ತಕ್ಷಣ ತಮ್ಮದೇ ಕಾರಿನಲ್ಲಿ ಶಿರಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಶಿರಸಿಯ ಪಂಡಿತ್ ಸರ್ಕಾರಿ ಆಸ್ಪತ್ರೆಗೆ ಗಾಯಾಳುವನ್ನು ದಾಖಲಿಸಿದ ಡಾ.ಅಂಜಲಿ, ಖುದ್ದಾಗಿ ತಾವೇ ವೈದ್ಯೋಪಚಾರ ನೀಡಿದ್ದಾರೆ. ಬೈಕ್ ಸವಾರನ ಕೈ ಹಾಗೂ ಕಾಲಿಗೆ ಗಂಭೀರ ಗಾಯಳಾಗಿದ್ದು, ಗಾಯಾಳುವಿಗೆ ತುರ್ತು ಚಿಕಿತ್ಸೆ ನೀಡಿ ಧೈರ್ಯ ತುಂಬಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News