ಭಟ್ಕಳದಲ್ಲಿ ಸಂಭ್ರಮದ ಈದ್ ಆಚರಣೆ

ಭಟ್ಕಳ : ಭಟ್ಕಳದಲ್ಲಿ ಸೋಮವಾರದಂದು ಈದ್-ಉಲ್-ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಭಟ್ಕಳದ ಈದ್ಗಾಹ್ ಮೈದಾನದಲ್ಲಿ ಬೆಳಿಗ್ಗೆ 7:15ಕ್ಕೆ ನಡೆದ ಈದ್ ಸಾಮೂಹಿಕ ಪ್ರಾರ್ಥನೆಯನ್ನು ಜಾಮಿಯಾ ಮಸೀದಿಯ ಖತೀಬ್ ಮೌಲಾನಾ ಅಬ್ದುಲ್ ಅಲೀಮ್ ಖತೀಬ್ ನದ್ವಿ ನೆರವೇರಿಸಿದರು.
ನಂತರ ಪರಸ್ಪರ ಶುಭಾಶಯ ಕೋರಿ ಒಬ್ಬರಿಗೊಬ್ಬರು ಆಲಿಂಗನ ಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿದರು. ಸಾಮೂಹಿಕ ಪ್ರಾರ್ಥನೆಗೂ ಮುನ್ನ ಜಾಮಿಯಾ ಮಸೀದಿಯ ಮುಖ್ಯಸ್ಥ ಮೌಲಾದ ಅಬ್ದಲ್ ಅಲೀಂ ಖತೀಬ್ ನದ್ವಿ ಅವರನ್ನು ಮೆರವಣಿಗೆಯಲ್ಲಿ ಈದ್ಗಾ ಮೈದಾನಕ್ಕೆ ಕರೆತರಲಾಯಿತು.
ಮಕ್ಕಳು, ವೃದ್ಧರು ಸೇರಿದಂತೆ ಸಾವಿರಾರು ಮಂದಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಭಟ್ಕಳ ಡಿ.ಎಸ್.ಪಿ.ಕೆ. ಮಹೇಶ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ ಕಾಯ್ಕಿಣಿ, ಪಿ.ಎಸ್.ಐ. ನವೀನ್ ನಾಯ್ಕ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಪೊಲೀಸ್ ಅಧಿಕಾರಿಗಳು ಬಿಗಿ ಬಂದೋಬಸ್ತ್ ಒದಗಿಸಿದ್ದರು.
ಈ ಸಂದರ್ಭದಲ್ಲಿ ಮಜ್ಲಿಸ್ ಇಸ್ಲಾಹ್ ವ ತಂಜೀಮ್ ಭಟ್ಕಳದ ವತಿಯಿಂದ ಸಮಸ್ತ ಹಿಂದೂ-ಮುಸ್ಲಿಮ್ ಬಾಂಧವರಿಗೆ ಶುಭಾಶಯ ಕೋರಲಾಯಿತು.