ಭಟ್ಕಳ ರಮಝಾನ್ ಬಜಾರ್‌ಗೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್‌ಪಿ) ಎಂ. ನಾರಾಯಣ್ ಅವರು ಭಟ್ಕಳದ ರಮಝಾನ್ ಬಜಾರ್‌ಗೆ ಭೇಟಿ ನೀಡಿದರು. ಈ ಭೇಟಿಯ ಸಂದರ್ಭದಲ್ಲಿ ಅವರು ಮಾರುಕಟ್ಟೆಯ ಸ್ಟಾಲ್‌ಗಳನ್ನು ಪರಿಶೀಲಿಸಿ, ಪೊಲೀಸ್ ಭದ್ರತಾ ವ್ಯವಸ್ಥೆಯನ್ನು ವೀಕ್ಷಿಸಿದರು.
ಎಸ್‌ಪಿ ಅವರೊಂದಿಗೆ ಭಟ್ಕಳ ಡಿವೈಎಸ್‌ಪಿ ಮಹೇಶ್ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮುದಾಯದ ಪ್ರಮುಖರಾದ ಇನಾಯತುಲ್ಲಾ ಶಾಬಂದ್ರಿ, ಅತೀಕುರ್ ರೆಹಮಾನ್ ಮುನೀರಿ ಮತ್ತು ಅಲ್ತಾಫ್ ಖರೂರಿ ಅವರು ಎಸ್‌ಪಿ ಅವರನ್ನು ಸ್ವಾಗತಿಸಿದರು.
ಎಸ್‌ಪಿ ಅವರು ತಮ್ಮ ಮಾತಿನಲ್ಲಿ ಭಟ್ಕಳವನ್ನು "ಮಿನಿ ದುಬೈ" ಎಂದು ವರ್ಣಿಸಿ, ರಮಝಾನ್ ಬಜಾರ್‌ನ ಸಿದ್ಧತೆಯನ್ನು ಭಟ್ಕಳ ಪುರಸಭೆ ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಶ್ಲಾಘಿಸಿದರು. ಈ ಬಜಾರ್‌ಗೆ ಒಂದೇ ಸಮುದಾಯದವರು ಮಾತ್ರವಲ್ಲದೆ, ಜಿಲ್ಲೆಯ ಎಲ್ಲಾ ಸಮುದಾಯದ ಜನರು ಬಂದು ವ್ಯಾಪಾರ ವಹಿವಾಟು ನಡೆಸುತ್ತಾರೆ ಎಂದು ಅವರು ತಿಳಿಸಿದರು. ಪೊಲೀಸ್ ಇಲಾಖೆಯಿಂದ ಸಮರ್ಪಕ ಭದ್ರತಾ ಕ್ರಮಗಳನ್ನು ಕೈಗೊಂಡು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಅವರು ಭರವಸೆ ನೀಡಿದರು.