ಮಾ.30 ರಿಂದ ಎ.6ರ ತನಕ 65ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ ಸಮಾರಂಭ

ಭಟ್ಕಳ: ಧರ್ಮಸ್ಥಳ ನಿತ್ಯಾನಂದ ನಗರದಲ್ಲಿರುವ ಶ್ರೀರಾಮಕ್ಷೇತ್ರದಲ್ಲಿ ಮಾ.30 ರಿಂದ ಎ.6ರ ತನಕ 65ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ ಸಮಾರಂಭ ಹಾಗೂ ಜಾತ್ರಾ ಮಹೋತ್ಸವ ವಿಜೃಂಬನೆಯಿಂದ ನಡೆಯಲಿದ್ದು, ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ ಸಮಾಜದವರು ಹಾಗೂ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಭಟ್ಕಳ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಆಸರಕೇರಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಆಸರಕೇರಿಯ ನಿಚ್ಛಲಮಕ್ಕಿ ವೆಂಕಟ್ರಮಣ ಸಭಾಭವನದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.
ನಾಮಧಾರಿ ಕುಲಗುರು ಶ್ರೀರಾಮಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಮಾ.30ರಂದು ವಾರ್ಷೀಕ ಪ್ರತಿಷ್ಠಾ ಮಹೋತ್ಸವ, ಮಾ.31ರಂದು ಶ್ರೀಗುರುದೇವ ಉತ್ಸವ ಮೂರ್ತಿಗಳಿಗೆ ಬಲಿ ಉತ್ಸವ ಪೂಜೆ. ಎ.1ರಂದು ಶ್ರೀರಾಮ ದೇವರ ರಜತ ಪಾಲಕಿ ಉತ್ಸವ, ಎ.2ರಂದು ಶ್ರೀ ಅನ್ನಪೂರ್ಣೆಶ್ವರಿ ದೇವಿಯ ಪುಷ್ಪ ರಥೋತ್ಸವ, ಎ.3ರಂದು ಶ್ರೀ ದುರ್ಗಾಪರಮೇಶ್ವರಿ ದೇವಿಯ ಚಂದ್ರಮಂಡಲ ರಥೋತ್ಸವ, ಎ.4ರಂದು ಶ್ರೀಗೋಪಾಲಕೃಷ್ಣ ದೇವರ ಬೆಳ್ಳಿ ರಥೋತ್ಸವ, ಎ.5ರಂದು ಶ್ರೀ ಹನುಮಾನ ದೇವರ ರಥೋತ್ಸವ ಹಾಗೂ ಎ.6ರಂದು ಮಹಾ ಬ್ರಹ್ಮರಥೋತ್ಸವ, ನೇಮೋತ್ಸವ ನಡೆಯಲಿದೆ ಎಂದರು. ಪ್ರತಿ ದಿವಸ ಅನ್ನಸಂತರ್ಪಣೆ, ಭಜನೆ ಕಾರ್ಯಕ್ರಮ ನಡೆಯಲಿದೆ ಎಂದರು.
ಭಟ್ಕಳ ನಾಮಧಾರಿ ಸಮಾಜದ ಗೌರವ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಹಾಗೂ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿ ಶ್ರೀರಾಮ ಕ್ಷೇತ್ರದಲ್ಲಿ ನಡೆಯುವ ಎಂಟು ದಿನಗಳ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾಮಧಾರಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರಾಗಿ ಪಾಲ್ಗೊಂಡು ಶ್ರೀರಾಮನ ಸೇವೆ ಮಾಡಿ ಗುರುಗಳ ಕೃಪೆಗೆ ಪಾತ್ರರಾಗುವಂತೆ ಕೋರಿಕೊಂಡರು. ಭಟ್ಕಳ ಸಾಮಧಾರಿ ಸಮಾಜದ ಉಪಾಧ್ಯಕ್ಷ ಎಂ.ಕೆ.ನಾಯ್ಕ, ಕಾರ್ಯದರ್ಶಿ ಡಿ.ಎಲ್.ನಾಯ್ಕ, ಸದಸ್ಯರಾದ ಶಿವರಾಮ ನಾಯ್ಕ, ಮಹಾಬಲೇಶ್ವರ ನಾಯ್ಕ,ವಿಠ್ಠಲ ನಾಯ್ಕ, ಪ್ರಕಾಶ ನಾಯ್ಕ, ಶ್ರೀರಾಮ ಸೇವಾ ಸಮಿತಿ ಸದಸ್ಯರಾದ ಈರಪ್ಪ ಗರ್ಡೀಕರ್, ಪರಮೇಶ್ವರ ನಾಯ್ಕ,ಗಣಪತಿ ನಾಯ್ಕ. ತಿಮ್ಮಪ್ಪ ನಾಯ್ಕ ಇತರರು ಇದ್ದರು.