ಭಟ್ಕಳದಲ್ಲಿ ಹನಿಟ್ರ್ಯಾಪ್‌ ಆರೋಪ: ಪ್ರಕರಣ ದಾಖಲು

Update: 2023-12-09 14:23 GMT

ಭಟ್ಕಳ: ಇಬ್ಬರು ಮಹಿಳೆಯರು ಸೇರಿಕೊಂಡು ವ್ಯಕ್ತಿಯೊಬ್ಬರಿಗೆ ವಂಚಿಸಿದ್ದು, ವಂಚನೆಗೊಳಗಾದ ವ್ಯಕ್ತಿ 40 ಸಾವಿರ ರೂ. ಮೋಸ ಹೋಗಿರುವ ಘಟನೆ ಭಟ್ಕಳ ಗ್ರಾಮೀಣಾ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಬಗ್ಗೆ ದಾಖಲಾಗಿದೆ.

ವಂಚನೆಗೊಳಗಾಗಿರುವ ವ್ಯಕ್ತಿಯನ್ನು ಶಕೀಲ್ ಕೋಬಟ್ಟೆ (49) ಎಂದು ಗುರುತಿಸಲಾಗಿದೆ. ಇವರು ಗಲ್ಫ್ ಮಾರ್ಕೆಟ್ ನಲ್ಲಿರುವ ತಮ್ಮ ಅಂಗಡಿಯಲ್ಲಿ ವ್ಯಾಪಾರ ಮಾಡಬೇಕಾದರೆ 25-30 ವಯಸ್ಸಿನ ಇಬ್ಬರು ಮಹಿಳೆಯರು ಬಂದು ಸಲುಗೆಯಿಂದ ಮಾತನಾಡಿ ನಂತರ ಮೊಬೈಲ್ ನಂಬರ್ ಪಡೆದುಕೊಂಡು ಹನಿಟ್ರ‍್ಯಾಪ್ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 30 ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ದೂರು ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News