ತೆಂಗಿನಗುಂಡಿ: ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರಾಜ್ಯಮಟ್ಟದಲ್ಲಿ ಪ್ರಥಮ
Update: 2024-01-20 15:16 GMT
ಭಟ್ಕಳ: ಮಧುಗಿರಿಯಲ್ಲಿ ನಡೆದ ರಾಜ್ಯಮಟ್ಟದ 17 ವರ್ಷ ವಯೋಮಿತಿಯ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ತೆಂಗಿನ ಗುಂಡಿಯ ವಿದ್ಯಾರ್ಥಿನಿ ತ್ರಿಶಾ ಶ್ರೀಧರ ದೇವಾಡಿಗ 100 ಮೀಟರ್ ಓಟ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿ ಶಾಲೆಗೆ, ತಾಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಇವಳ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ವಿಡಿ ಮೊಗೆರ್, ದೈಹಿಕ ಶಿಕ್ಷಣ ಪರಿವೀಕ್ಷಕರಾದ ದತ್ತಾತ್ರೇಯ ನಾಯ್ಕ್ ಮುಖ್ಯೋ ಪಾಧ್ಯಾಯರಾದ ಉಷಾ ಜಿ ಭಟ್, ದೈಹಿಕ ಶಿಕ್ಷಣ ಶಿಕ್ಷಕರಾದ ಗಿರೀಶ್ ವಿ ನಾಯಕ್ ಹಾಗೂ ಉಳಿದ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮೋಹನ್ ದೇವಾಡಿಗ ಹಾಗೂ ಸದಸ್ಯರು, ಊರ ನಾಗರಿಕರು ಹಳೆಯ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.