ಭಟ್ಕಳದ ಪತ್ರಕರ್ತ ರಾಘವೇಂದ್ರ ಹೆಬ್ಬಾರ್ ಗೆ ಅಜ್ಜೀಬಳ ಪ್ರಶಸ್ತಿ

Update: 2024-01-29 13:21 GMT

ಭಟ್ಕಳ: ಭಟ್ಕಳ ತಾಲೂಕಿನಲ್ಲಿ 20 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ತೊಡಗಿಸಿಕೊಂಡಿರುವ ಮಾರುಕೇರಿಯ ರಾಘು ಹೆಬ್ಬಾರ್ ಎಂದೆ ಗುರುತಿಸಲ್ಪಡುವ ಪತ್ರಕರ್ತ ರಾಘವೇಂದ್ರ ಹೆಬ್ಬಾರ್ ರಿಗೆ ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಜಿ.ಎಸ್.ಹೆಗಡೆ ಅಜ್ಜೀಬಳ ಪ್ರಶಸ್ತಿಯನ್ನು ಶಿರಸಿಯ ಟಿ.ಆರ್.ಸಿ ಸಭಾಂಗಣದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನಿಸಲಾಯಿತು.

ಜನಾಂತರಂಗ ಪತ್ರಿಕೆಯ ಭಟ್ಕಳ ಕಾರ್ಯಲಯದ ವ್ಯವಸ್ಥಾಪರಾಗಿ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟ ಹೆಬ್ಬಾರ್ ನಂತರ ಜನಾಂತ ರಂಗ ಪತ್ರಿಕೆಯ ವರದಿಗಾರರಾಗಿ ಪತ್ರಿಕೆಯನ್ನು ಬೆಳೆಸಿದರು. ಸಧ್ಯ ಕನ್ನಡ ಪ್ರಭಾ ಪತ್ರಿಕೆ ವರದಿಗಾರರಾಗಿದ್ದು ”ಕರಾವಳಿ ಪ್ರಭಾ’ ಎಂಬ ಪಾಕ್ಷಿಕ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರಾಗಿ, ಜಿಲ್ಲಾ ಪತ್ರಿಕಾ ಮಂಡಳಿಯ ಕಾರ್ಯದರ್ಶಿಯಾಗಿ ಅಪಾರ ಅನುಭವ ಹೊಂದಿರುವ ಇವರು ಇತ್ತೀಚೆಗೆ ಸ್ಥಾಪನೆಯಾಗಿರುವ ಭಟ್ಕಳ ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರ ಹೊಣೆಗಾರಿಕೆಯೂ ಇವರ ಮೇಲಿದೆ.

ಭಟ್ಕಳ ತಾಲೂಕಿನ ಪತ್ರಕರ್ತರೊಬ್ಬರಿಗೆ ಇಂತಹ ಪ್ರತಿಷ್ಟಿತ ಬಂದಿರುವುದು ತಾಲೂಕಿನ ಪತ್ರಕರ್ತರಿಗೆ ಗೌರವವನ್ನು ತಂದಿದೆ ಎಂದು ಭಟ್ಕಳ ತಾಲೂಕು ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ರಾಧಕೃಷ್ಣ ಭಟ್, ಅಧ್ಯಕ್ಷ ಎಂ.ಆರ್.ಮಾನ್ವಿ ಉಪಾಧ್ಯಕ್ಷ ಮೋಹನ್ ನಾಯ್ಕ, ಸದಸ್ಯರಾದ ಸತೀಶಕುಮಾರ್ ನಾಯ್ಕ, ಇನಾಯತುಲ್ಲಾ ಗವಾಯಿ, ಫಯ್ಯಾಝ್ ಮುಲ್ಲಾ, ರಿಝ್ವಾನ್ ಗಂಗೋಳಿ, ಅತಿಕುರ‍್ರಹ್ಮಾನ್ ಶಾಬಂದ್ರಿ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News