ಖತರ್ ನಲ್ಲಿ ಇ-ಫುಟ್ಬಾಲ್ ಏಷ್ಯನ್ ಕಪ್; ಭಾರತ ತಂಡದಲ್ಲಿ ಭಟ್ಕಳದ ಇಬ್ರಾಹೀಮ್ ಗುಲ್ರೇಝ್

Update: 2024-01-30 13:56 GMT

ಭಟ್ಕಳ: ಏಷ್ಯನ್ ರಾಷ್ಟ್ರಗಳ ಏಷ್ಯನ್ ಫುಟ್ಬಾಲ್ ಒಕ್ಕೂಟದ ಪರವಾಗಿ ದೋಹಾ ಕತರ್‌ನಲ್ಲಿ ಜ. 31 ರಿಂದ ಫೆ. 5 ರವರೆಗೆ ಇ-ಏಷ್ಯನ್ ಕಪ್ 2023 ಪ್ರಾರಂಭವಾಗುತ್ತಿದ್ದು ವಿಶ್ವದ ವಿವಿಧ ದೇಶಗಳ ಇ-ಫುಟ್‌ಬಾಲ್ ಚಾಂಪಿಯನ್‌ಗಳು ಭಾಗವಹಿಸುತ್ತಿದ್ದಾರೆ. ಭಾರತವನ್ನು ಪ್ರತಿನಿಧಿಸುತ್ತಿರುವ ತಂಡದಲ್ಲಿ ಭಟ್ಕಳದ ಇಬ್ರಾಹೀಮ್ ಗುಲ್ರೇಝ್ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಬಿಡುಗಡೆ ಮಾಡಿರುವ ವಿವರಗಳ ಪ್ರಕಾರ, ಇ-ಫುಟ್‌ಬಾಲ್ ಏಷ್ಯನ್ ಕಪ್‌ಗೆ ಅರ್ಹತಾ ಸುತ್ತಿನಲ್ಲಿ ಅರ್ಹತೆ ಪಡೆದ ಭಾರತದ ಮೂವರು ಸದಸ್ಯರ ತಂಡವು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ರಾಷ್ಟ್ರೀಯ ಚಾಂಪಿಯನ್ ಭಟ್ಕಳದ ಇಬ್ರಾಹೀಮ್ ಗುಲ್ರೇಝ್ ಸಹ ಸೇರಿದ್ದು, ಹೇಮಂತ್ ಕೃಷ್ಣ ಕೊಮ್ಮು ಮತ್ತು ಚರಂಜೋತ್ ಸಿಂಗ್ ಸಹ ಆಟಗಾರರಾಗಿದ್ದಾರೆ.

ಇಬ್ರಾಹಿಂ ಗುಲ್ರೇಜ್ ದುಬೈನಿಂದ ದೋಹಾಗೆ ಆಗಮಿಸಿದ್ದು, ಉಳಿದ ಇಬ್ಬರು ಆಟಗಾರರು ಭಾರತದಿಂದ ಆಗಮಿಸಿದ್ದಾರೆ.

ಏಷ್ಯನ್ ಫುಟ್ಬಾಲ್ ಕಾನ್ಫೆಡರೇಶನ್ (ಎಎಫ್‌ಸಿ) ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಆಟಗಾರರು ದೋಹಾದ ಇಜ್ಡಾನ್ ಪ್ಯಾಲೇಸ್ ಹೋಟೆಲ್‌ನಲ್ಲಿ ತಂಗಲಿದ್ದಾರೆ, ಪಂದ್ಯಗಳು ವರ್ಚುಸಿಟಿ ಅರೆನಾ, ದೋಹಾ ಫೆಸ್ಟಿವಲ್ ಸಿಟಿ ಮಾಲ್‌ ನಲ್ಲಿ ನಡೆಯಲಿವೆ.

ಈ ಇ-ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು ಫೆಬ್ರವರಿ 1 ರಂದು ನಡೆಯಲಿದ್ದು, ಅದೇ ದಿನ ಗುಂಪು ಪಂದ್ಯಗಳು ಪ್ರಾರಂಭವಾಗಲಿವೆ. ನಾಕೌಟ್ ಸುತ್ತುಗಳು ಮತ್ತು ಕ್ವಾರ್ಟರ್ ಫೈನಲ್‌ಗಳು ಫೆಬ್ರವರಿ 4 ರಂದು ನಡೆಯ ಲಿದ್ದು, ಸೆಮಿಫೈನಲ್ ಮತ್ತು ಅಂತಿಮ ಸುತ್ತುಗಳು ಫೆಬ್ರವರಿ 5 ರಂದು ನಡೆಯಲಿದೆ. ವಿಜೇತ ತಂಡಕ್ಕೆ ಚಿನ್ನದ ಪದಕ ಹಾಗೂ ರನ್ನರ್ ಅಪ್ ತಂಡಕ್ಕೆ ಬೆಳ್ಳಿ ಪದಕಗಳನ್ನು ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News