ಭಟ್ಕಳ: ಕರಾಟೆಯಲ್ಲಿ ಚಿನ್ನದ ಪದಕ; ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ

Update: 2024-02-06 16:33 GMT

ಭಟ್ಕಳ: ನೇಪಾಳದ ಕಾಠ್ಮಂಡುವಿನಲ್ಲಿ ನಡೆದ ಕರಾಟೆ ಸ್ಫರ್ಧೆಯಲ್ಲಿ  ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದ ಭಟ್ಕಳದ ಶೊಟೋಕಾನ್ ಕರಾಟೆ ಶಾಲೆಯ ಐವರು ವಿದ್ಯಾರ್ಥಿಗಳನ್ನು ಭಟ್ಕಳದಲ್ಲಿ ನಾಗರಿಕರು ಹಾಗೂ ಸಂಘ ಸಂಸ್ಥೆಯ ಪ್ರತಿನಿಧಿಗಳು ಅದ್ದೂರಿಯಾಗಿ ಸ್ವಾಗತ ನೀಡಿದರು.

ನೇಪಾಳದ ಕಾಠ್ಮಂಡುವಿನಲ್ಲಿ ಜ28 ರಿಂದ ಜ.30ರ ವರೆಗೆ ನಡೆದ ಸ್ಪರ್ಧೆಯಲ್ಲಿ ಶ್ರೀಲಂಕಾ, ಪಾಕಿಸ್ತಾನ, ಭೂತಾನ, ಬಾಂಗ್ಲಾದೇಶ ಮತ್ತು ಭಾರತದಿಂದ ಒಟ್ಟು 350 ಸ್ಪರ್ಧಾಳುಗಳು ಭಾಗವಹಿಸಿದ್ದರು. ಭಾರತದಿಂದ ಒಟ್ಟ 27 ಕ್ರೀಡಾಪಟು ಗಳು ಭಾಗವಹಿಸಿದ್ದು ಅದರಲ್ಲಿ ಕರ್ನಾಟಕದಿಂದ 5 ಕ್ರೀಡಾಳುಗಳು ಇದ್ದರು. ಭಟ್ಕಳ ಪಟ್ಟಣದ ಆರ್ಯನ್ ವಾಸುದೇವ ನಾಯ್ಕ, ಮಂಜುನಾಥ ಗಜಾನನ ದೇವಡಿಗ, ಪ್ರವೀಣ ಹರಿಜನ, ಭರಣಿ ಅದಿ ದ್ರಾವಿಡ, ತೇಜಸ್ವಿ ಮೊಗೇರ ಅವರು ಪ್ರಥಮ ಸ್ಥಾನಿಯಾಗಿ ಜಯಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದರು.

ಇವರು ಭಟ್ಕಳಕ್ಕೆ ಆಗಮಿಸುತ್ತಿರುವಂತೆ ಭಟ್ಕಳದ ನಾಗರಿಕರು, ಸಂಘ ಸಂಸ್ಥೆಯ ಪ್ರಮುಖರು ಅದ್ದೂರಿಯ ಸ್ವಾಗತ ನೀಡಿದ್ದಾರೆ. ಚಂಡೆ ವಾದ್ಯಗಳಿಂದ ಬರಮಾಡಿಕೊಂಡು ಕರಾಟೆ ಶಾಲೆಯ ವಿದ್ಯಾರ್ಥಿಗಳು ಇವರೊಂದಿಗೆ ಜಾಥಾ ನಡೆಸಿದರು. ಸಂಶುದ್ದೀನ ಸರ್ಕಲಿನಿಂದ ಆರಂಭವಾದ ಮೆರವಣಿಗೆ ಹಳೆ ಬಸ್ ನಿಲ್ದಾಣದ ಮೂಲಕ ಸಾಗಿ ಬಳಿಕ ವಿದ್ಯಾಭಾರತಿ ಶಾಲೆಯ ಬಳಿಗೆ ಸಾಗಿ ಬಂದಿದೆ. ದೇಶಕ್ಕಾಗಿ ಚಿನ್ನ ಗೆದ್ದ 5 ವಿದ್ಯಾರ್ಥಿಗಳು, ಅವರಿಗೆ ತರಬೇತಿ, ಮಾರ್ಗದರ್ಶನ ನೀಡಿದ ತರಬೇತಿದಾರರಿಗೆ, ಅವರಿಗೆ ನೇಪಾಳ ತೆರಳಲು ಆರ್ಥಿಕ ಸಹಾಯ ಮಾಡಿದ ಸಚಿವ ಮಂಕಾಳ ವೈದ್ಯರಿಗೆ ಸಂಘಟಕರು ಅಭಿನಂದನೆ ಸಲ್ಲಿಸಿದರು.




Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News