ಭಟ್ಕಳ: ಸಚಿವ ಮಾಂಕಾಳ ವೈದ್ಯರನ್ನು ಭೇಟಿಯಾದ ಸರಾಬಿ ಹೋರಾಟ ಸಮಿತಿ ನಿಯೋಗ

Update: 2024-03-11 11:54 GMT

ಭಟ್ಕಳ: ಸರಾಬಿ ನದಿ ಸ್ವಚ್ಚತೆ ಕುರಿತಂತೆ ಸಕ್ರೀಯವಾಗಿರುವ ಸರಾಬಿ ನದಿ ಹೋರಾಟ ಸಮಿತಿ ನಿಯೋಗವು ಇತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ವೈದ್ಯರನ್ನು ಭೇಟಿಯಾಗಿ ಸರಬಿ ನದಿಯನ್ನು ಕೂಡಲೇ ಸ್ವಚ್ಛಗೊಳಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ನಿಯೋಗದೊಂದಿಗೆ ಮಾತನಾಡಿದ ಸಚಿವ ಮಾಂಕಾಳ ವೈದ್ಯ ಸರಾಬಿ ನದಿ ಹೂಳು ತೆಗೆಯುವುದು ಒಂದು ದೊಡ್ಡ ಯೋಜನೆಯಾಗಿದೆ. ಕೇವಲ ಹಿಟಾಚಿ, ಜೆಸಿಬಿ ಯಂತ್ರಗಳ ಮೂಲಕ ನದಿಯ ಹೂಳು ತೆಗೆದು ನದಿಯನ್ನು ಆಳಗೊಳಿಸುವ ಕೆಲಸ ಆಗುವುದಿಲ್ಲ, ಇದಕ್ಕಾಗಿ ಡ್ರೆಜ್ಜಿಂಗ್ ಯಂತ್ರ ತಂದು ಆಳಗೊಳಿಸುವ ಕಾಮಗಾರಿ ಆರಂಭಿಸಬೇಕು, ಆದ್ದರಿಂದ ನಾನು ನಿಮಗೆ ಯಾವುದೇ ಸುಳ್ಳು ಬರವಸೆ ನೀಡಲು ಆಗುವುದಿಲ್ಲ. ಈ ಕೆಲಸ ಮುಂದಿನ ವರ್ಷಕ್ಕೆ ಮಾಡಲು ಸಾಧ್ಯವಾಗುತ್ತದೋ ಎಂದು ನೋಡೋಣ ಎಂದು ತಿಳಿಸಿದ್ದು, ಇದರಿಂದಾಗಿ ನಿಯೋಗಕ್ಕೆ ನಿರಾಸೆಯಾಗಿದೆ ಎಂದು ಹೇಳಲಾಗಿದೆ.

ಸರಬಿ ನದಿ ಸ್ವಚ್ಛತೆಗೆ ನಗರದ ತಗ್ಗು ಪ್ರದೇಶಗಳ ಜನರು ಚಿಂತಾಕ್ರಾಂತರಾಗಿರುವ ಸರಬಿ ನದಿ ಹೋರಾಟ ಸಮಿತಿಯ ಪದಾಧಿಕಾರಿಗಳು ಹೆಚ್ಚು ಕಡಿಮೆ ಪ್ರತಿದಿನ ಸಭೆ ನಡೆಸಿ ಮುಂದಿನ ಯೋಜನೆ ರೂಪಿಸುತ್ತಿದ್ದಾರೆ.

ನಿಯೋಗದ ಪರವಾಗಿ ಮಾತನಾಡಿದ ಪುರಸಭಾ ಸದಸ್ಯ ಕೈಸರ್ ಮೊಹತೆಶಮ್, ಚೌತ್ನಿ ಮತ್ತು ಮುಂಡಳ್ಳಿ ಕಡೆಗೆ ನದಿಯ ಬದಿಗಳಲ್ಲಿ ಬೇಲಿ ಹಾಕಿರುವುದರಿಂದ ಮಳೆಯ ಸಂದರ್ಭದಲ್ಲಿ ತಗ್ಗು ಪ್ರದೇಶದ ಎಲ್ಲಾ ಜನರಿಗೆ ದೊಡ್ಡ ಸಮಸ್ಯೆ ಯಾಗಬಹುದು. ಆದರೆ ಘೌಸಿಯಾ ಸ್ಟ್ರೀಟ್, ಮುಶ್ಮಾ ಸ್ಟ್ರೀಟ್, ಖಲೀಫಾ ಸ್ಟ್ರೀಟ್, ಡಾರಂಟ, ಡೊಂಗರಪಳ್ಳಿ, ಬೆಳ್ನಿ ಮುಂತಾದ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ನದಿಯ ಉದ್ದಕ್ಕೂ ಬೇಲಿ ಹಾಕದ ಕಾರಣ ಭಾರೀ ಮಳೆಯ ಸಂದರ್ಭ ನದಿಯ ನೀರು ಎಲ್ಲಾ ತಗ್ಗು ಪ್ರದೇಶಗಳಿಗೆ ಪ್ರವೇಶಿಸುತ್ತದೆ. ಪ್ರವಾಹದಂತಹ ಪರಿಸ್ಥಿತಿ ಎದುರಾಗಬಹುದು ಎಂದು ತಿಳಿಸಿದ್ದಾರೆ.

ಗೌಷಿಯಾ ಬೀದಿಯಲ್ಲಿರುವ ಪಂಪಿಂಗ್ ಸ್ಟೇಷನ್‌ನ ಸಮಸ್ಯೆಗಳು ಮತ್ತು ಕಲುಷಿತಗೊಂಡ ಬಾವಿಗಳಲ್ಲಿ ಚರಂಡಿ ಸಂಗ್ರಹವಾಗಿರುವ ಬಗ್ಗೆಯೂ ದೂರು ಬಂದಿದ್ದು, ಸಚಿವರಿಂದ ತೃಪ್ತಿಕರ ಪ್ರತಿಕ್ರಿಯೆ ಸಿಕ್ಕಿಲ್ಲ. ಇದೇ ಕಾರಣಕ್ಕೆ ನಿಯೋಗ ನಿರಾಸೆಯಿಂದ ಹಿಂತಿರುಗಬೇಕಾಯಿತು ಎನ್ನಲಾಗಿದೆ.

ನಿಯೋಗದಲ್ಲಿ ಮೌಲವಿ ಅಂಜುಮ್ ಗಂಗಾವಳಿ ನದ್ವಿ, ಮುಹಮ್ಮದ್ ಹುಸೇನ್ ಅಸ್ಕರಿ, ಮುಬಶ್ಶಿರ್ ಹುಸೇನ್ ಹಲ್ಲಾರೆ, ಇಮ್ಶಾದ್ ಅಖ್ತರ್, ಅಶ್ಫಾಕ್ ಕೆ.ಎಂ, ಮುಸ್ತಫಾ ಅಸ್ಕರಿ, ಶಮೂನ್ ಹಾಜಿ ಫಖಿ, ಮೌಲವಿ ಇರ್ಷಾದ್ ನಾಯ್ತೆ ನದ್ವಿ, ಇರ್ಶಾದ್ ಸಿದ್ದಿಖಾ, ತಂಝೀಮ್ ಮುಖಂಡರಾದ ಎಸ್.ಎಂ.ಸೈಯದ್ ಪರ್ವೇಝ್, ನ್ಯಾಯವಾದಿ ಇಮ್ರಾನ್ ಲಂಕಾ, ಇಮ್ತಿಯಾಝ್ ಉ‌ದ್ಯಾವರ್, ಇರ್ಷಾದ್ ಗವಾಯಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News