ಅಂಕೋಲಾ: ನೆರವಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ

Update: 2024-07-19 07:09 GMT

ಜಗನ್ನಾಥ್‌ ನಾಯ್ಕ್

ಶಿರೂರು: ತಮ್ಮ ಸಂಬಂಧಿಕರೊಬ್ಬರ ನೆರವಿಗೆ ತೆರಳಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಕುಮಟಾ ತಾಲೂಕಿನ ಬಾಡ-ಹುಬ್ಬಣಗೇರಿಯ `ಬಾಬ್ಲುಮನೆ’ಯ ಜಗನ್ನಾಥ ನಾಯ್ಕ (61) ಕಾಣೆಯಾದ ವ್ಯಕ್ತಿ. ಈವರೆಗೂ ಅವರ ಸುಳಿವು ಸಿಕ್ಕಿಲ್ಲ. ಅವರು ಬದುಕಿರುವ ಬಗ್ಗೆಯೂ ಮಾಹಿತಿ ಇಲ್ಲ. ಸಾವನಪ್ಪಿದ ಬಗ್ಗೆಯೂ ಖಚಿತವಾಗಿಲ್ಲ. ಹೀಗಾಗಿ ಇವರೂ ಭೂಕುಸಿತದಲ್ಲಿ ಸಿಲುಕಿರಬಹುದೆಂಬ ಸಂಶಯ ವ್ಯಕ್ತವಾಗಿದೆ.

ಭೂ ಕುಸಿತದ ದಿನ ಬೆಳಗ್ಗೆ ಜಗನ್ನಾಥ ನಾಯ್ಕ ಅವರು ತನ್ನ ಬಾವ ಲಕ್ಷ್ಮಣ ನಾಯ್ಕರನ್ನು ಮಾತನಾಡಿಸಿಕೊಂಡು ಬರಲು ಶಿರೂರಿನಲ್ಲಿ ಚಹಾ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕರ ಚಹಾದ ಅಂಗಡಿಗೆ ಹೋಗಿದ್ದರು. `ಬಾವನಿಗೆ ಜ್ವರ ಬಂದಿದೆ. ಸ್ವಲ್ಪ ಸಹಾಯ ಮಾಡಿ ಬರುತ್ತೇನೆ’ ಎಂದು ಹೇಳಿ ಹೋಗಿದ್ದ ಜಗನ್ನಾಥ್ ನಾಯ್ಕರು ಮನೆಗೆ ಮರಳಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

ಲಕ್ಷ್ಮಣ ನಾಯ್ಕರ ಅಕ್ಕನನ್ನು ವರಿಸಿದ ಜಗನ್ನಾಥ್ ಶಿರೂರಿನಲ್ಲಿಯೇ ಮನೆ ನಿರ್ಮಿಸಿಕೊಂಡಿದ್ದರು. ಇದೀಗ ಜಗನ್ನಾಥ್ ಅವರ ಪತ್ನಿ ಹಾಗೂ ಮೂರು ಹೆಣ್ಣು ಮಕ್ಕಳು ಆತಂಕದಲ್ಲಿದ್ದಾರೆ.  

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News