ಸರಕಾರ ನಾಗರಿಕ ಸೌಲಭ್ಯ ನೀಡುತ್ತದೆ, ಸುಪ್ರೀಂ ಕೋರ್ಟ್ ಒಕ್ಕಲೆಬ್ಬಿಸುತ್ತದೆ: ರವೀಂದ್ರ ನಾಯ್ಕ
ಭಟ್ಕಳ: ಸರ್ಕಾರವು ಜೀವನಕ್ಕೆ ಉಪಯುಕ್ತವಾದ ಮೂಲಭೂತ ಸೌಕರ್ಯಗಳನ್ನ ಅರಣ್ಯವಾಸಿಗಳಿಗೆ ನೀಡುತ್ತದೆ ಆದರೆ ಸುಪ್ರೀಂ ಕೋರ್ಟ್ ಅನಧಿಕೃತ ಒತ್ತುದಾರರನ್ನ ಒಕ್ಕಲೆಬ್ಬಿಸಲು ಆದೇಶ ನೀಡುತ್ತದೆ. ಈ ಹಿನ್ನಲೆಯಲ್ಲಿ ಭೂಮಿ ಸರ್ಕಾರ ಹಕ್ಕಿಗಾಗಿ ಇಚ್ಛಾಶಕ್ತಿ ಪ್ರದಶೀಸಬೇಕೆಂದು ಅರಣ್ಯ ಭೂಮಿ ಹಕ್ಕು ಹೊರಾಟಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯತಿಯಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.
ಅರಣ್ಯವಾಸಿಗಳಿಗೆ ಸರ್ಕಾರ ವಾಸ್ತವ್ಯ ಹಿಮಾರತಿಗೆ ಮನೆ ನಂಬರ್, ವಿದ್ಯುತ್, ನೀರು, ರಸ್ತೆ, ರೆಷನ್ ಕಾರ್ಡ, ಆಧಾರ ಕಾರ್ಡ್ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡುವುದಲ್ಲದೇ ಮನೆಕರ ವಸುಲಿ ಮಾಡುತ್ತಿದೆ ಆದರೆ ಸುಪ್ರೀಂ ಕೋರ್ಟ್ ನಲ್ಲಿ ಅನಧಿಕೃತ ಅತಿಕ್ರಮಣದಾರರನ್ನ ಒಕ್ಕಲೇಬ್ಬಿಸುತ್ತದೆಂದು ವಿಷಾದಕರ ಎಂದು ಅವರು ಹೇಳಿದರು.
ಸಭೆಯಲ್ಲಿ ಪಾಂಡುರಂಗ ನಾಯ್ಕ ಸ್ವಾಗತಿಸಿದರು ದುರಿಣರಾದ ದೇವರಾಜ ಗೊಂಡ, ಚಂದ್ರು ನಾಯ್ಕ, ಸಂಕೇತ, ಗಿರೀಶ ನಾಯ್ಕ, ಫಾತೀಮಾಬಿ ಪಠಾಣಿ, ಮಂಜು ಮರಾಠಿ ಮುಂತಾದವರು ಉಪಸ್ಥಿತರಿದ್ದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ತಿರಸ್ಕಾರವಾಗಿರುವ ಅರಣ್ಯ ವಾಸಿಗಳನ್ನ ಒಕ್ಕಲೆಬ್ಬಿಸುವಂತೆ ಪರಿಸರ ವಾದಿಗಳು ದಾಖಲಿಸಿದ ಸಾರ್ವಜನಿಕ ಹಿತಾಶಕ್ತಿಯ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ನಿರ್ಣಾಯಕ ವಿಚಾರಣೆ ಹಂತದಲ್ಲಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.