ಕಾರವಾರ: ಗಂಟಲಿಗೆ ಬಲೂನ್ ಸಿಲುಕಿ ಬಾಲಕ ಮೃತ್ಯು

Update: 2024-12-02 08:45 GMT

ಸಾಂದರ್ಭಿಕ ಚಿತ್ರ shutterstock.com

ಕಾರವಾರ: ಮನೆಯಲ್ಲಿ ಆಟವಾಡುತ್ತಿದ್ದಾಗ ಗಂಟಲಿಗೆ ಬಲೂನ್ ಸಿಲುಕಿ ಬಾಲಕನೋರ್ವ ಮೃತಪಟ್ಟ ಘಟನೆ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ನಡೆದಿದೆ.

ನವೀನ ನಾರಾಯಣ ಬೆಳಗಾಂವಕರ್ (13) ಮೃತ ವಿದ್ಯಾರ್ಥಿ. ಈತ ಜೋಗನಕೊಪ್ಪ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

ಬಲೂನ್ ಊದಲು ಹೋಗಿದ್ದ. ಈ ವೇಳೆ ಬಲೂನ್ ಬಾಯಿಯ ಒಳಗೆ ಜಾರಿ ಹೋಗಿ ಗಂಟಲಲ್ಲಿ ಸಿಲುಕಿಕೊಂಡಿದೆ. ಉಸಿರುಗಟ್ಟಿದ ಪರಿಣಾಮ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News