ನಗರದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು : ಶಾಸಕ ಎಚ್.ಆರ್.ಗವಿಯಪ್ಪ
ಹೊಸಪೇಟೆ : ವಿಜಯನಗರದ 35 ವಾರ್ಡ್ ನ ಒಳಚರಂಡಿ, ಸಿಸಿ ರೋಡ್, ಸಮೂಹಿಕ ಭವನ ನಿರ್ಮಾಣ, ಸೋಲಾರ್ ಲೈಟ್, ಬೀದಿ ದೀಪಗಳು, ಯು.ಜಿ.ಡಿ.ಕಾಮಗಾರಿಕೆ, ಉದ್ಯಾನವನ, ಸೇರಿದಂತೆ ಹಲವು ಕಾಮಗಾರಿಗಳಿಗೆ ಶಾಸಕ ಎಚ್.ಆರ್.ಗವಿಯಪ್ಪ ಹಸಿರು ನಿಶಾನೆ ತೋರಿದ್ದಾರೆ.
ನಗರಸಭೆ ಪೌರಾಯುಕ್ತರು ಶಾಸಕ ಎಚ್.ಆರ್.ಗವಿಯಪ್ಪರನ್ನು ಭೇಟಿ ಮಾಡಿ 35 ವಾರ್ಡ್ ಗಳ ಮೂಲಸೌಕರ್ಯ ಸೇರಿದಂತೆ ಸಿಸಿ ರಸ್ತೆ ಕಾಮಗಾರಿಗೆ ಒಳಚರಂಡಿ ಕಾಮಗಾರಿ ಕೈಗೊಳ್ಳುವ ಬಗ್ಗೆ ಶಾಸಕರ ಜೊತೆ ಚರ್ಚಿಸಿದರು.
ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ಕೇಂದ್ರ ಸರಕಾರದ 15ನೇ ಫೈನಾನ್ಸ್ ನಿಂದ 14 ಕೋಟಿ ರೂ. ಅನುದಾನ ಬಂದಿದೆ. ಮೈನಾರಿಟಿಯಿಂದ 10 ಕೋಟಿ ರೂ. ಹಾಗೂ ಸ್ಪೆಷಲ್ ಗ್ರಾಂಟ್ ನಿಂದ 5 ಕೋಟಿ ರೂ. ಬಂದಿರುತ್ತದೆ ಎಂದರು.
ಸ್ವಚ್ಛತೆಯ ಬಗ್ಗೆ ನಗರದಲ್ಲಿ ಮೊದಲ ಆದ್ಯತೆ ಕೊಡಬೇಕು. ಆಗಲೇ ನಗರದಲ್ಲಿ ಜನಸಾಮಾನ್ಯರು ಸ್ವಚ್ಛತೆಯನ್ನು ಕಾಪಾಡುತ್ತಾರೆ, ಕಳಪೆ ಕಾಮಗಾರಿ ಆಗದಂತೆ ನೋಡಿಕೊಳ್ಳಬೇಕು. ನಮ್ಮ ನಗರವನ್ನು ಸ್ವಚ್ಛವಾಗಿ ಇಡುವುದಕ್ಕೋಸ್ಕರ ಏನು ಬೇಕೋ ಅದನ್ನು ನೀವು ನನಗೆ ತಿಳಿಸಿಕೊಟ್ಟರೆ ಸರಕಾರಕ್ಕೆ ಸಮಸ್ಯೆಯನ್ನು ತಿಳಿಸಿ ಸಮಸ್ಯೆ ಬಗ್ಗೆ ಹರಿಸುತ್ತೇನೆ. ಹಂತ ಹಂತವಾಗಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಜನಸಾಮಾನ್ಯರ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು.