18ನೇ ವಯಸ್ಸಿಗೆ ಕಮರ್ಷಿಯಲ್ ಪೈಲಟ್ ಆದ ವಿಜಯಪುರದ ಸಮೈರಾ ಹುಲ್ಲೂರು

Update: 2024-12-03 17:28 GMT

ವಿಜಯಪುರ : 18ನೇ ವರ್ಷಕ್ಕೆ ಕಮರ್ಷಿಯಲ್ ಪೈಲಟ್ ಲೈಸನ್ಸ್ ಪಡೆಯುವ ಮೂಲಕ ಗುಮ್ಮಟ ನಗರಿಯ ಯುವತಿಯೊಬ್ಬಳು ಭಾರತದ ಅತೀ ಕಿರಿಯ ಪೈಲಟ್ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದಾಳೆ.

ವಿಜಯಪುರ ಜಿಲ್ಲೆಯ ಗೋಲಗುಮ್ಮಟ ಸಮೀಪದ ಅಮೀನ್ ಹುಲ್ಲೂರು-ನಾಝಿಯಾ ಹುಲ್ಲೂರು ದಂಪತಿಯ ಮಗಳು ಸಮೈರಾ ಹುಲ್ಲೂರು ಈ ದಾಖಲೆ ಮಾಡಿದ ಯುವ ಪ್ರತಿಭೆ. ಸಮೈರಾ ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಾಲೆಯ ವಿದ್ಯಾಭ್ಯಾಸವನ್ನ ವಿಜಯ ಪುರದಲ್ಲಿ ಪೂರ್ಣಗೊಳಿಸಿದ್ದು, ನಂತರ ದೆಹಲಿಯಲ್ಲಿ 6 ತಿಂಗಳ ಪೈಲಟ್ ತರಬೇತಿಯನ್ನು ಮುಗಿಸಿದ್ದಳು. 25ನೇ ವರ್ಷಕ್ಕೆ ಪೈಲಟ್ ಆಗಿರುವ ಕ್ಯಾಪ್ಟನ್ ತಪೇಶ್ ಕುಮಾರ್ ಅವರೇ ನನಗೆ ಪ್ರೇರಣೆ ಎಂದು ಸಮೈರಾ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾಳೆ. ಇದೀಗ ಸಮೈರಾ 18ನೇ ವರ್ಷಕ್ಕೆ ಪೈಲಟ್ ಆಗುವ ಮೂಲಕ ತಪೇಶ್ ಅವರನ್ನು ಮೀರಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News