20ರ ಸಾಧನೆ 50ರ ಗಡಿದಾಟಲಿ
ನಾನು ಇವತ್ತು ತುಂಬಾ ಖುಷಿಯಾಗಿದ್ದೇನೆ.
ಪತ್ರಿಕೆ ಕೂಡಾ ತುಂಬಾ ಖುಷಿಯಲ್ಲಿದೆ.
ಈ ಸಂದರ್ಭ ನನಗೆ ಬಹಳ ಆಪ್ತವಾಗಿದೆ.
‘ವಾರ್ತಾಭಾರತಿ’ಗೆ ೨೦ ವರ್ಷ ತುಂಬಿದ್ದು ಒಂದು ಹಬ್ಬ.
ಒಂದು ಪತ್ರಿಕೆ ಯಾವುದೇ ರಾಜಕೀಯ ಪಕ್ಷದ ಪರವಾಗಿರದೆ, ಯಾವುದೇ ಪೂರ್ವಗ್ರಹಗಳಿಲ್ಲದೆ, ಪತ್ರಿಕಾ ಧರ್ಮವನ್ನು ನಿಷ್ಠೆಯಿಂದ ಪಾಲಿಸುತ್ತಾ, ೨೦ ವರ್ಷ ಬದುಕುವುದು ಅಂದರೆ, ಅದು ಬಹಳ ದೊಡ್ಡ ಸಾಧನೆ.
ನಾನು ‘ವಾರ್ತಾಭಾರತಿ’ಯ ಸಂಪಾದಕರಿಗೆ ಮತ್ತು ಎಲ್ಲಾ ಬಳಗಕ್ಕೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ‘ವಾರ್ತಾಭಾರತಿ’ ೫೦ ವರ್ಷಗಳನ್ನು ಪೂರೈಸಲಿ ಎಂದು ಹಾರೈಸುತ್ತೇನೆ. ಒಳ್ಳೆಯದಾಗಲಿ.
ಕಳೆದ ವರ್ಷದ ಸುಂದರವಾದ ವಾರ್ಷಿಕ ವಿಶೇಷಾಂಕವನ್ನು ನಾನು ಬಹಳ ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಮನಸ್ಸು ಒಂದೊಂದು ಸಾರಿ ಏನಾದರೂ ಬಯಸಿದಾಗ ಈ ಪುಸ್ತಕವನ್ನು ತಿರುವಿ ಹಾಕುತ್ತಿರುತ್ತೇನೆ. ಎಷ್ಟು ಚಂದದ ವಿನ್ಯಾಸ, ಎಂತಹ ಉತ್ತಮವಾದ ಲೇಖನಗಳು, ಮೌಲ್ಯವನ್ನು ಕಾಪಾಡಿಕೊಂಡಂತಹ ಸಿದ್ಧಾಂತಗಳು ಎಲ್ಲವೂ ಇದರಲ್ಲಿವೆ.
ಈ ರೀತಿ ಪತ್ರಿಕಾ ಧರ್ಮವನ್ನು ನಿರ್ವಹಿಸುವ ಬಳಗಕ್ಕೆ ಆತ್ಮ ಶಕ್ತಿ ಮತ್ತು ಧೈರ್ಯ ಎಲ್ಲವೂ ಜೊತೆಯಲ್ಲಿರಬೇಕು.
ಜನಬಲವೂ ಕೂಡಾ ಇದರ ಜೊತೆಯಲ್ಲಿರಬೇಕು ಎಂಬುದು ನನ್ನ ಆಶಯ.
ಆಲ್ ದಿ ವೆರಿ ಬೆಸ್ಟ್ ಫಾರ್ ದಿಸ್. ಧನ್ಯವಾದ.
ಹಂಸಲೇಖ
ಖ್ಯಾತ ಸಂಗೀತ ನಿರ್ದೇಶಕರು