ಸುರಪುರ | ಗುಣಾತ್ಮಕ ಶಿಕ್ಷಣ ನೀಡುವ ಜವಬ್ದಾರಿ ಎಲ್ಲ ಶಿಕ್ಷಕರ ಮೇಲಿದೆ : ಗುರುಲಿಂಗಪ್ಪ ಖಾನಾಪುರ
ಸುರಪುರ : ಶಿಕ್ಷಕರಾದವರಿಗೆ ವಿದ್ಯಾರ್ಥಿಗಳಿಗೆ ಗುಣಾತ್ಮಕವಾದ ಶಿಕ್ಷಣ ನೀಡಿ ಅವರನ್ನು ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಜವಬ್ದಾರಿ ಎಲ್ಲಾ ಶಿಕ್ಷಕರ ಮೇಲಿದೆ ಎಂದು ನಿವೃತ್ತ ಕೆಪಿಎಸ್ ಶಾಲೆ ಉಪ ಪ್ರಾಂಶುಪಾಲ ಗುರುಲಿಂಗಪ್ಪ ಖಾನಾಪುರ ಮಾತನಾಡಿದರು ತಿಳಿಸಿದರು.
ನಗರದ ರಂಗಂಪೇಟೆಯ ಕೆಪಿಎಸ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಈ ಶಾಲೆಯಲ್ಲಿಯೇ ಹೈಸ್ಕೂಲ್ ವರೆಗೆ ಕಲಿತು, ನಂತರ ಸಹ ಶಿಕ್ಷಕನಾಗಿ, ಉಪ ಪ್ರಾಂಶುಪಾಲನಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಾರ್ಥಕ ಮತ್ತು ಸಂತೋಷದ ಭಾವನೆ ನನ್ನಲ್ಲಿದೆ ಎಂದರು.
ಈ ಸಂದರ್ಭದಲ್ಲಿ ವಯೋನಿವೃತ್ತಿ ಹೊಂದಿದ ಉಪ ಪ್ರಾಂಶುಪಾಲ ಗುರುಲಿಂಗಪ್ಪ ಖಾನಾಪುರ ದಂಪತಿಗಳಿಗೆ ಹಾಗೂ ವರ್ಗಾವಣೆಗೊಂಡ ಶಿಕ್ಷಕರಾದ ಮಲ್ಕಣ್ಣ, ಸೈಯದ್ ತರುನಮ್ ಸುಲ್ತಾನ್ ಅವರಿಗೆ ಶಾಲೆಯಿಂದ ಹಾಗೂ ಎಸ್ ಡಿಎಮ್ ಸಿ ಮತ್ತು ಮಕ್ಕಳ ಪೋಷಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬಸವರಾಜ ಕೊಡೇಕಲ್ ಹಾಗೂ ಮುಖ್ಯ ಅತಿಥಿಗಳಾಗಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ ನಿಂಬೂರ, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ, ಉಪ ಪ್ರಾಂಶುಪಾಲ ಸಿದ್ದಣ್ಣ ಹೊಸಗೌಡರ್ ಮಾತನಾಡಿದರು.
ವೇದಿಕೆಯಲ್ಲಿ ಸರಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರಾಮಕೃಷ್ಣ ಕಲಬುರಗಿ, ಎಸ್ಡಿಎಮ್ಸಿ ಅಧ್ಯಕ್ಷ ನಾಸೀರ ಹುಸೇನ್ ಕುಂಡಾಲೆ, ಸರಕಾರಿ ಪ್ರೌಢ ಶಾಲಾ ನೌಕರರ ಸಂಘದ ತಾಲೂಕ ಅಧ್ಯಕ್ಷ ಖಾದರ ಪಟೇಲ್ ಇದ್ದರು. ಶಿಕ್ಷಕ ಶ್ರೀನಿವಾಸ ಕುಲಕರ್ಣಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಎಸ್ಡಿಎಮ್ಸಿ ಸದಸ್ಯರು, ಶಾಲೆಯ ಎಲ್ಲಾ ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ನೂರಾರು ವಿದ್ಯಾಸದಸ್ಯರು ಭಾಗವಹಿಸಿದ್ದರು.