ಡಿ.30ರಂದು ಯಾದಗಿರಿಯಲ್ಲಿ ʼವಾಕಥಾನ್ʼ - ತಂಬಾಕು ಮುಕ್ತ ಅಭಿಯಾನ

Update: 2024-12-27 14:00 GMT

ಯಾದಗಿರಿ: ತಂಬಾಕು ಮುಕ್ತ ಅಭಿಯಾನದಂಗವಾಗಿ ಡಿ. 30 ರಂದು ನಗರದಲ್ಲಿ ಭಾರತೀಯ ವೈದ್ಯಕೀಯ ಸಂಘದಿಂದ ವಾಕಥಾನ್ (ನಡುಗೆ) ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ.ಚಂದ್ರಕಾಂತ ಪೂಜಾರಿ ಮತ್ತು ಕಾರ್ಯಕ್ರಮದ ಮುಖ್ಯ ಸಂಯೋಜಕ ಡಾ. ವೀರೇಶ ಜಾಕಾ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷದ ಹೊಸ್ತಿಲಲ್ಲಿ ಜನತೆಗೆ ಹೊಸ ಸಂದೇಶ ರವಾನಿಸುವ‌‌ ಕುರಿತು ಸಂಘವು ನಮ್ಮ ನಡೆ ಆರೋಗ್ಯದ ಕಡೆ ಎಂಬ ಘೋಷಣೆಯೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಅಂದು ಬೆಳಗ್ಗೆ 7ಕ್ಕೆ ನಗರದ ಲುಂಬಿನಿ ವನದಿಂದ ಆರಂಭಗೊಳ್ಳುವ ನಡುಗೆ ಜಾಥಾ ಅಲ್ಲಿಂದ ಡಾ.ಅಂಬೇಡ್ಕರ್ ಸರ್ಕಲ್, ಕನಕ ಸರ್ಕಲ್, ಕಾಡ್ಲುರ್ ಪೇಟ್ರೋಲ್ ಬಂಕ್,ಅ ಮರ ಲೇಜೌಟ್ ಮೂಲಕ ಮತ್ತೆ ಲುಂಬಿನಿ ವನಕ್ಕೆ ಆಗಮಿಸಿ ಅಲ್ಲಿ ಉತ್ತಮ ಆರೋಗ್ಯದ ಬಗ್ಗೆ ಸೇರಿದ ಜನತೆಗೆ ಅರಿವು ಮೂಡಿಸಲಾಗುವುದು ಎಂದು ಅವರು ವಿವರಿಸಿದರು.

ಅಂದಿನ ಬೆಳಗಿನ ವಾಕಥಾನ್ ದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಇನ್ನೂ ಹೆಚ್ಚಿನ‌ ಸಂಖ್ಯೆಯಲ್ಲಿ‌ ನಗರದ ನಾಗರಿಕರು ಸೇರಬೇಕೆಂದು ಮನವಿ ಮಾಡಿರುವ ಅವರು, ಹೊಸ ವರ್ಷದಲ್ಲಿ ಎಲ್ಲರೂ ತಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು, ಸರ್ವರ ಬದುಕು ತಂಬಾಕು ರಹಿತವಾಗಬೇಕು. ಉತ್ತಮ ಆರೋಗ್ಯಕ್ಕೆ ಜಾಗೃತೆ ವಹಿಸಬೇಕೆಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಭಗವಂತ ಅನ್ವಾರ್, ಡಾ.ಹೊನಗುಂಟಿ, ಡಾ.ರಾಘವೇಂದ್ರ, ಡಾ.ಸುರೇಶರಡ್ಡಿ, ಡಾ.ವೈಜನಾಥ ಮತ್ತು ಡಾ.ಸುನೀಲ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News