ಯಾದಗಿರಿ | ಮನಮೋಹನ್ ಸಿಂಗ್ ನಿಧನಕ್ಕೆ ಡಾ.ಭೀಮಣ್ಣ ಮೇಟಿ ಸಂತಾಪ

Update: 2024-12-27 10:59 GMT

ಯಾದಗಿರಿ : ಭಾರತ ದೇಶದ ಆರ್ಥಿಕ ಸುಧಾರಣೆಗಳ ಹರಿಕಾರ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ನಿಧನ ಭಾರತ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಭೀಮಣ್ಣ ಮೇಟಿ ಹೇಳಿದರು.

ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಸಂತಾಪ ಸೂಚಿಸಿರುವ ಅವರು, ದೇಶದ ಆರ್ಥಿಕ ನೀತಿಗೆ ಹೊಸ ರೂಪು ನೀಡಿದವರು ಅವರು. ಆರ್ಥಿಕ ಉದಾರೀಕರಣ ಅವರ ನೀತಿಗಳು ಕೋಟ್ಯಂತರ ಜನರ ಬದುಕು ಬದಲಿಸಿದೆ ಎಂದು ತಿಳಿಸಿದರು.

ಎರಡು ಬಾರಿ ದೇಶದ ಪ್ರಧಾನಮಂತ್ರಿಯಾಗಿ ಉತ್ತಮವಾದ ಆಡಳಿತ ನೀಡಿದ್ದಾರೆ. ದೇಶಕ್ಕೆ ಆಹಾರ ಭದ್ರತಾ ಕಾಯಿದೆಯನ್ನು ಜಾರಿಗೊಳಿಸುವ ಮೂಲಕ ಬಡವರ ಹಸಿವು ನೀಗಿಸಿದ್ದಾರೆ ಎಂದು ಹೇಳಿದರು.

ಅಪಾರವಾದ ಜ್ಞಾನ ಹೊಂದಿದ್ದ ಅವರು, ಅಭಿವೃದ್ಧಿ ಪಥದಲ್ಲಿ ದೇಶವನ್ನು ಮುನ್ನೆಡಿಸಿದ್ದಾರೆ. ಜಗತ್ತಿನ ಆರ್ಥಿಕ ತಜ್ಞ ದೇಶಕ್ಕೆ ಭದ್ರ ಬುನಾದಿ ಹಾಕಿದ ಶ್ರೇಷ್ಠ ನಾಯಕನನ್ನು ಕಳೆದುಕೊಂಡು ದೇಶ ಇವತ್ತು ಬಡವಾಗಿದೆ ಎಂದು ತಿಳಿಸಿದರು.

ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ರಾಜಕೀಯದಲ್ಲಿ ಎಲ್ಲರನ್ನು ಗೌರವದಿಂದ ಕಾಣುತ್ತಿದ್ದರು. ಕಿರಿಯರಿಗೆ ಅಗತ್ಯವಾದ ಸಲಹೆ ಕೂಡ ನೀಡುತ್ತಿದ್ದರು. ನಿಜಕ್ಕೂ ಅವರ ಕೊಡುಗೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News