ಯಾದಗಿರಿ | ಡಾ.ಮನಮೋಹನ್ ಸಿಂಗ್ ನಿಧನಕ್ಕೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಸಂತಾಪ
Update: 2024-12-27 10:17 GMT
ಯಾದಗಿರಿ : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನಕ್ಕೆ ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ಅವರು ಕಂಬನಿ ಮಿಡಿದಿದ್ದಾರೆ.
ಸರ್ವ ಶ್ರೇಷ್ಠ ಆರ್ಥಿಕ ತಜ್ಞ, ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನ ಭಾರತಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಮಿತ ಭಾಷಿ, ಸರಳ, ಸಜ್ಜನಿಕೆಯ ನಾಯಕರಾಗಿದ್ದ ಡಾ.ಮನಮೋಹನ್ ಸಿಂಗ್ ಅವರು ಭಾರತದ ಆರ್ಥಿಕತೆಯ ದಿಕ್ಸೂಚಿಯನ್ನೇ ಬದಲಿಸಿದವರು. ಅವರು ಜಾರಿಗೆ ತಂದ ನೂತನ ಉದಾತ ಆರ್ಥಿಕ ನೀತಿ ಭಾರತಕ್ಕೆ ಅವರು ನೀಡಿದ ಅತ್ಯುನ್ನತ ಕೊಡುಗೆ ಎಂದಿದ್ದಾರೆ.