ಯಾದಗಿರಿ | ಸ್ವಾಮಿ ವಿವೇಕಾನಂದರ 163ನೇ ಜಯಂತಿ ಕಾರ್ಯಕ್ರಮ

Update: 2025-01-12 13:26 GMT

ಯಾದಗಿರಿ : ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವಕರು ಅಳವಡಿಸಿಕೊಂಡಲ್ಲಿ ಮತ್ತು ಅವರನ್ನು ಆದರ್ಶ ನಾಯಕರಾಗಿ ಆಯ್ಕೆ ಮಾಡಿಕೊಂಡಲ್ಲಿ ಯಶಸ್ಸು ನಿಶ್ಚಿತ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾದ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ ಅಭಿಪ್ರಾಯಪಟ್ಟರು.

ಅವರು ರವಿವಾರ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 163ನೇ ಜಯಂತಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು.

ವಿವೇಕಾನಂದರು ಈ ದೇಶದ ಪರಂಪರೆ ಹಾಗೂ ಸಂಸ್ಕೃತಿಯನ್ನು ವಿಶ್ವದುದ್ದಕ್ಕೂ ಸಂಚರಿಸಿ ತಿಳಿಸಿ ಹೇಳುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ, ಶಿವರಾಜ ಗುತ್ತೇದಾರ, ಭೀಮು ಪೂಜಾರಿ, ನಾಗು ರಾಮಸಮುದ್ರ, ಬಸ್ಸು ಮಡಿವಾಳ ಶಾವಂತಗೇರಾ, ರೋಹಿತ್ ಗಣಪೂರ, ನಾಗೇಶ ಗದ್ದಿಗಿ, ನಾಗರಾಜ್ ಸಾಹುಕಾರ . ಸಾಬು ಚಿಂತನಳ್ಳಿ, ಭೀಮು ದಾಸ, ಸಾಗರ ಪತ್ತಾರ, ಸುರೇಶ ಬಾಬು, ರವಿ ಕೊಂಕಲ್, ನಾಗರಾಜ ಕಾಡಂಗೇರಾ, ಪವನ್ ಗೋಸಿ, ನವಾಜ್ ಖಾದ್ರಿ ಸೇರಿದಂತೆ ಇನ್ನಿತರರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News