ಯಾದಗಿರಿ | ಹುಟ್ಟು ಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ
Update: 2025-01-13 13:27 GMT
ಯಾದಗಿರಿ : ಮಾದಿಗ ದಂಡೋರ ಎಂ ಆರ್ ಪಿ ಎಸ್ ಯಾದಗಿರಿ ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣ್ಣಗೇರಾ ಅವರ ಹುಟ್ಟು ಹಬ್ಬದ ಅಂಗವಾಗಿ ರೋಗಿಗಳಿಗೆ ಸೈದಾಪೂರ ಹೋಬಳಿಯ ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರು.
ಇದೇ ವೇಳೆಯಲ್ಲಿ ಮಾತನಾಡಿದ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಜು ಮೇತ್ರೆ ಅವರು, ಸಮಾಜಕ್ಕಾಗಿ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿರುವ ಕಾಶಪ್ಪ ಹೇಗಣ್ಣಗೇರಾ ಅವರಿಗೆ ಇನ್ನಷ್ಟು ದೇವರು ಆರೋಗ್ಯ ಆಯಸ್ಸು ಕೊಟ್ಟು ಸಮಾಜದ ಅಭಿವೃದ್ಧಿಗಾಗಿ ದುಡಿಯುವ ಶಕ್ತಿ ನೀಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲಪ್ಪ ಕಾಯಿಪಾಳ್ಯ, ರಾಜು ಕೂಡ್ಲೂರ್, ಶಾಂತಪ್ಪ ಬೆಳಗುಂದಿ, ಹಣಮಂತ ಕೂಡ್ಲೂರು, ಬಸಲಿಂಗಪ್ಪ ಕೂಡ್ಲೂರು, ಸಾಗರ್ ಷಣ್ಮುಖ, ಸುಭಾಷ್ ಗೋತ್ರಾಜ್ ,ನಾಗಪ್ಪ ಕನೇಕಲ್, ಮರಿಯಪ್ಪ ಬೀಳಾರ್, ಸೇರಿದಂತೆ ಅನೇಕ ಯುವ ಮುಖಂಡರು ಭಾಗವಹಿಸಿದ್ದರು.