ಯಾದಗಿರಿ | ಅಂಗವಿಕಲರಿಗೆ ಅನುಕಂಪದ ಬದಲಿಗೆ ಅವಕಾಶ ನೀಡಿ : ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು

Update: 2025-01-12 13:23 GMT

ಯಾದಗಿರಿ : ಅಂಗವಿಕಲರಿಗೆ ಅನುಕಂಪದ ಬದಲಿಗೆ ಅವಕಾಶ ನೀಡಿದರೇ ಮಹಾನ್ ಸಾಧಕರಾಗುವಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಭಾನುವಾರ ಸಂಜೆ ಶಾಸಕರ ಕಚೇರಿಯಲ್ಲಿ 19 ಜನ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.

2023-24 ನೇ ಸಾಲಿನ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಅನುದಾನದಡಿ ಕ್ಷೇತ್ರದ ಅರ್ಹ ಅಭ್ಯರ್ಥಿಗಳಿಗೆ ವಾಹನ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಅರ್ಜಿ ಹಾಕಿದ ಅರ್ಹ ಅಂಗವಿಕಲರಿಗೆ ವಾಹನ ನೀಡಲಾಗುವುದೆಂದರು.

ರಾಜ್ಯ ಸರ್ಕಾರ ಅನೇಕ ಯೋಜನೆ ಮತ್ತು ಅನುದಾನ ನೀಡುತ್ತಿದೆ. ಅವುಗಳನ್ನು ಪಡೆದು ಆರ್ಥಿಕವಾಗಿ ಮೇಲೆ ಬಂದು ಸ್ವಾಭಿಮಾನದ ಜೀವನ ನಡೆಸಬೇಕೆಂದು ಅಂಗವಿಕರಿಗೆ ಶಾಸಕರು ಕಿವಿ ಮಾತು ಹೇಳಿದರು.

ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ಅಧಿಕಾರಿ ಶರಣಗೌಡ ಪಾಟೀಲ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಾಬಣ್ಣಾ ಕೆಂಗೂರಿ, ಮಲ್ಲಿಕಾರ್ಜುನ ಈಟೆ, ಅಂಬರೀಶ ಜಾಕಾ, ಲಕ್ಷ್ಮಣರಡ್ಡಿ, ಮರೆಪ್ಪ ಬಿಳಾರ, ಶರಣಗೌಡ ಕುರಕುಂದಾ, ಸಾಬಣ್ಣಾ ಖ್ಯಾತನಾಳ್, ಪ್ರವೀಣಕುಮಾರ ಕುಲಕರ್ಣಿ,ಕೇಶವ ಕುಲಕರ್ಣಿ, ಬನ್ನಪ್ಪ ಕುರಕುಂದಾ, ವೆಂಕಟೇಶ ಎಸ್.ದಾಸ ನಕೇರಿ ಸೇರಿದಂತೆ ಇತರರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News