ಯಾದಗಿರಿ | 62ನೇ ಅಖಿಲ ಭಾರತ ಗೃಹರಕ್ಷಕರ ದಿನಾಚರಣೆ

Update: 2024-12-07 15:17 GMT

ಯಾದಗಿರಿ : ಸುರಪುರ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕರ್ನಾಟಕ ರಾಜ್ಯ ಗೃಹ ರಕ್ಷಕದಳ ಯಾದಗಿರಿ ಜಿಲ್ಲಾ ಘಟಕದಿಂದ ಅಖಿಲ ಭಾರತ ಗೃಹರಕ್ಷಕ ದಿನಾಚರಣೆ-2024 ನಡೆಸಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಎಸ್.ಮುಧೋಳ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮತ್ತು ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟರಾದ ಧರಣೇಶ ಮಾತನಾಡಿದರು.

ನಿವೃತ್ತ ಗೃಹರಕ್ಷಕರಿಗೆ, ಕರ್ತವ್ಯ ಸಾಧಕರಿಗೆ ಹಾಗೂ ಘಟಕಾಧಿಕಾರಿಗಳಿಗೆ ಚಿನ್ನದ ಪದಕ ನೀಡಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪರಸ್ಕೃತರಾದ ಸುರಪುರ ಘಟಕಾಧಿಕಾರಿ ವೆಂಕಟೇಶ ಸುರಪುರ ಹಾಗೂ ಇಮಾಮ್ಸಾಬ್ ಹುಣಸಗಿ ಅವರಿಗೆ ಸನ್ಮಾನಿಸಲಾಯಿತು.

ಡಿವೈಎಸ್ಪಿಗಳಾದ ಜಾವೇದ್ ಇನಾಮದಾರ್, ಭರತ ತಳವಾರ, ಪಿಐ ಆನಂದ ವಾಗ್ಮೋಡೆ ಸೇರಿ ಇತರೆ ಪೊಲೀಸ್ ಅಧಿಕಾರಿಗಳು, ಹೋಮಗಾಡ್ರ್ಸ್ನ ಜಿಲ್ಲಾ ಬೋಧಕರು, ಕಚೇರಿ ಸಿಬ್ಬಂದಿಗಳು ಹಾಗೂ ಯಾದಗಿರಿ ಜಿಲ್ಲೆಯ ಎಲ್ಲಾ ಘಟಕಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಮಸ್ತ ಗೃಹರಕ್ಷಕರು ಇದ್ದರು. ದಶರಥ ಸ್ವಾಗತಿಸಿದರು. ಗೃಹರಕ್ಷಕ ದಳದ ಜಿಲ್ಲಾ ಬೋಧಕರಾದ ವಿದ್ಯಾವತಿ ನಿರೂಪಿಸಿ ವಂದಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News