ಯಾದಗಿರಿ | ಸರಕಾರಿ ಬಸ್‌ನಲ್ಲಿ ಕುಳಿತಲ್ಲಿಯೇ ವ್ಯಕ್ತಿ ಮೃತ್ಯು
Update: 2024-11-26 18:12 GMT
ಯಾದಗಿರಿ : ಹೈದರಾಬಾದ್‌ನಿಂದ ಸುರಪುರ ತಾಲ್ಲೂಕಿಗೆ ಬರುತ್ತಿರುವ ಸರಕಾರಿ ಬಸ್‌ನಲ್ಲಿ ವ್ಯಕ್ತಿಯೊಬ್ಬರು ಕುಳಿತಲ್ಲಿಯೇ ಸಾವನಪ್ಪಿರುವ ಘಟನೆ ಮಂಗಳವಾರ ಸಂಜೆ ಸುರಪುರ ತಾಲೂಕಿನ ಬಸ್ ನಿಲ್ದಾಣದಲ್ಲಿ ನಡೆದಿದೆ.
ಯಾದಗಿರಿಯ ನಿವಾಸಿ ಅಬ್ದುಲ್ ಸತ್ತಾರ್ ಬಾದಲ್ ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ.
ಮಂಗಳವಾರ ರಾತ್ರಿ 8:30ಕ್ಕೆ ಬಸ್ ಸುರಪುರ ಬಸ್ ನಿಲ್ದಾಣಕ್ಕೆ ಬಂದಾಗ ಎಲ್ಲಾ ಪ್ರಯಾಣಿಕರು ಕೆಳಗೆ ಇಳಿದು, ಈ ವ್ಯಕ್ತಿ ಇಳಿಯದೆ ಇದ್ದಾಗ ಬಸ್ ಚಾಲಕ, ನಿರ್ವಾಹಕನ ಗಮನಿಸಿ ಹತ್ತಿರ ಹೋಗಿ ನೋಡಿದಾಗ ಮೃತಪಟ್ಟಿದ್ದು ತಿಳಿದುಬಂದಿದೆ.
ಸ್ಥಳಕ್ಕೆ ಸುರಪುರ ಠಾಣೆ ಪೊಲೀಸರು ಭೇಟಿ ನೀಡಿ ತಾಲೂಕು ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.