ಯಾದಗಿರಿ | ನಗರ ಉದ್ಯಾನವನಗಳಿಗೆ ಮರುಜೀವ : ನಗರಸಭೆ ಅಧ್ಯಕ್ಷೆ ಲಲಿತಾ

Update: 2024-11-25 13:37 GMT

ಯಾದಗಿರಿ : ನಗರ ಪ್ರದೇಶದಲ್ಲಿರುವ ಬಹುತೇಕ ಉದ್ಯಾನವನಗಳ ಯೋಗ್ಯವಾಗಿರದೆ, ಕಸದ ರಾಶಿಯಿಂದ ಕೂಡಿದ್ದು, ಸಾರ್ವಜನಿಕರ ಬಳಕೆಗೆ ಬಾರದೆ ಇರುವುದನ್ನು ನಗರಸಭೆ ಗಮನದಲ್ಲಿಟ್ಟುಕೊಂಡು ಉದ್ಯಾನವನಗಳಿಗೆ ಮರುಜೀವ ನೀಡುವ ಕಾರ್ಯ ಮಾಡಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಹೇಳಿದ್ದಾರೆ.

ನಗರದ ಅನೇಕ ಉದ್ಯಾನವನಗಳಿಗೆ ಸೋಮವಾರದಂದು ಮರುಜೀವ ನೀಡುವ ಸ್ವಚ್ಛತಾ ಕಾರ್ಯ ಹಮ್ಮಿಕೊಂಡು ಮಾತನಾಡಿದ ಅವರು, ಸುಮಾರು ದಿನಗಳಿಂದ ಜಾಲಿ-ಕಂಟಿ ಬೆಳೆದು ಸಾರ್ವಜನಿಕರು ಉದ್ಯಾನವನಗಳಿಗೆ ಹೋಗದೇ ಇರುವುದು ಸ್ಥಳೀಯರಲ್ಲಿ ಸ್ಥಳದ ಅಭಾವ ಕಾಡುತ್ತಿತ್ತು. ಉದ್ಯಾನವನ ಸ್ಥಳಗಳಲ್ಲಿನ ಮುಳ್ಳು ಗಿಡಗಳನ್ನು ಕಡಿಸಿ ಸ್ವಚ ಮಾಡಲಾಗಿದೆ ಎಂದರು.

ನಜರೇತ ಕಾಲೇಜ್ ಗಾರ್ಡಬ್, ಸರ್ದಾರ್ ವಲ್ಲಭಭಾಯಿ ಪಟೇಲ್, ಅಜೀಜ್ ಕಾಲೋನಿ ಗಾರ್ಡನ್ ಗಳಲ್ಲಿನ ಗಿಡ ಗಂಟಿಗಳನ್ನು ತಗೆದು ಸ್ವಚ್ಚತೆ ಮಾಡಲಾಗಿದೆ. ಇದರಿಂದ ಸಾರ್ವಜನಿಕರು ಉದ್ಯಾನವನದಲ್ಲಿ ಓಡಾಡಲು ಅನುಕೂಲವಾಗಿದೆ ಎಂದು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News