ಯಾದಗಿರಿ | ಭಾರತದ ಸಂವಿಧಾನ ಜಗತ್ತಿನ ಎಲ್ಲ ಸಂವಿಧಾನಗಳಿಗಿಂತ ಭಿನ್ನವಾಗಿದೆ : ನ್ಯಾ.ಬಸವರಾಜ

Update: 2024-11-26 15:39 GMT

ಯಾದಗಿರಿ : ಭಾರತದ ಸಂವಿಧಾನ ಜಗತ್ತಿನ ಎಲ್ಲ ಸಂವಿಧಾನಗಳಿಗಿಂತ ಭಿನ್ನವಾಗಿದೆ. ಭಾರತದ ಸಂವಿಧಾನ ಒಬ್ಬ ವ್ಯಕ್ತಿಗಾಗಿ ಅಲ್ಲ ಇಡೀ ದೇಶದ ಜನತೆಗಾಗಿ ಇರುವ ಸಂವಿಧಾನವಾಗಿದೆ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಬಸವರಾಜ ಹೇಳಿದ್ದಾರೆ.

ಸುರಪುರ ತಾಲೂಕಿನ ದೇವಿಕೇರಾ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಸಂವಿಧಾನ ಜಗತ್ತಿನ ಅನೇಕ ರಾಷ್ಟ್ರಗಳ ಸಂವಿಧಾನವನ್ನು ಒಳಗೊಂಡಿದೆ. ಒಂದೊಂದು ರಾಷ್ಟ್ರದ ಸಂವಿಧಾನದಲ್ಲಿನ ಪ್ರಮುಖ ಅಂಶವನ್ನು ಒಳಗೊಂಡ ಜಗತ್ತಿನ ಪ್ರಮುಖ ಸಂವಿಧಾನಗಳಲ್ಲಿ ನಮ್ಮ ದೇಶದ ಸಂವಿಧಾನವು ಒಂದಾಗಿದೆ. ಇಂತಹ ಸಂವಿಧಾನ ದೇಶದಲ್ಲಿ ಜಾರಿಯಾಗಿ 75ವರ್ಷಗಳಾಗಿದ್ದು, ದೇಶದ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯನು ಗೌರವಿಸಬೇಕಾದುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಹಿರಿಯ ವಕೀಲ ಗುರುಪಾದಪ್ಪ ಬನ್ನಾಳ, ವಕೀಲ ಚನ್ನಪ್ಪ ಹೂಗಾರ, ಶಾಲೆಯ ಮುಖ್ಯೋಪಾಧ್ಯಾಯ ರಾಜಮಹ್ಮದ ಕೋಡಿಹಾಳ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ರಮಾನಂದ ಕವಲಿ, ಸಹಾಯಕ ಸರಕಾರಿ ಅಭಿಯೋಜಕರಾದ ಮರೆಪ್ಪ ಹೊಸಮನಿ, ಶಿಕ್ಷಕ ತಿಪ್ಪೇಸ್ವಾಮಿ ಎಮ್.ಆರ್, ಗಿರೀಶ, ಮಹಾದೇವಿ, ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News