ಯಾದಗಿರಿ | ಸಂಘಟನೆ ಪ್ರಬಲವಾದಷ್ಟು ಸಮಾಜ ಅಭಿವೃದ್ಧಿ : ಎಂ.ವೈ.ಸಾಗರ್

Update: 2024-11-24 12:36 GMT

ಯಾದಗಿರಿ : ʼಸಂಘಟನೆಯಲ್ಲಿ ಎಲ್ಲರೂ ಒಗ್ಗಟಿನಿಂದ ಕೆಲಸ ಮಾಡಿದರೆ ಮಾತ್ರ ಒಂದು ಸಂಘಟನೆಯಶಸ್ವಿಯಾಗಲು ಸಾಧ್ಯ ಮತ್ತು ಸಮಾಜ ಅಭಿವೃದ್ಧಿಯಾಗಲು ಸಾಧ್ಯʼ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಕರ್ನಾಟಕ ರಾಜ್ಯ ಯುವ ಘಟಕದ ಅಧ್ಯಕ್ಷ ಎಂ.ವೈ.ಸಾಗರ್ ಅವರು ಹೇಳಿದರು.

ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸಂಘದ ನೂತನ ಪದಾಧಿಕಾರಿಗಳ ನೇಮಕ ಮಾಡಿ ಮಾತನಾಡಿದ ಅವರು, ʼಸಂಘಟನೆ ಶಕ್ತಿ ಪ್ರಬಲವಾದಷ್ಟು ನಾವು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಬೆಳೆಯಲು ಸಾಧ್ಯ. ಇದರಿಂದಾಗಿ ಸಮಾಜಕ್ಕೆ ಪ್ರತಿಯೊಬ್ಬರು ಕೊಡುಗೆ ನೀಡಬೇಕು. ನಿತ್ಯದ ಕೆಲಸದ ಜೊತೆಗೆ ಸ್ವಲ್ಪ ಸಮಾಜಕ್ಕೂ ಸಮಯ ಮೀಸಲಿಡಬೇಕುʼ ಎಂದು ಹೇಳಿದರು.

ನಂತರ ಮಾತನಾಡಿದ ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮಾಸನ್ ಹಳ್ಳಿ, ಹಳ್ಳಿಗಳಲ್ಲಿ ದಲಿತ ಸಂಘರ್ಷ ಸಮಿತಿ ಸಂಘಟನೆ ಕಟ್ಟಿ ಸಂವಿಧಾನದತ್ತವಾಗಿ ನಮಗೆ ದಕ್ಕಬೇಕಾಗಿರುವ ಸವಲತ್ತುಗಳನ್ನು ಪಡೆದುಕೊಳ್ಳೋಣ. ನಮ್ಮ ಸಂಘಟನೆ ಜಿಲ್ಲೆಯ ಮೂಲೆ ಮೂಲೆಗೂ ವಿಸ್ತರಿಸುವ ಕೆಲಸ ನಾವು ಮಾಡಬೇಕು. ಈ ಸಂಘಟನೆ ಮೂಲಕ ಜನರ ಸೇವೆ ಮಾಡುವ ಅವಕಾಶ ನಮಗೆ ಸಿಕ್ಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದ ಪ್ರಯೋಜನ ತಲುಪುವಂತೆ ಮಾಡುವುದೇ ನಮ್ಮ ಉದ್ದೇಶ ಎಂದರು.

ನೂತನ ಪದಾಧಿಕಾರಿಗಳ ನೇಮಕ

ಜಿಲ್ಲಾ ಉಪಾಧ್ಯಕ್ಷರಾಗಿ ರಡ್ಡಿ ಛಲವಾದಿ, ತಾಲ್ಲೂಕು ಅಧ್ಯಕ್ಷರಾಗಿ ಭೀಮರಾಯ ಈಟೆ, ಉಪಾಧ್ಯಕ್ಷರಾಗಿ ತಿಮ್ಮಣ್ಣ ಮಂಜುಳಕರ್, ಯುವ ಘಟಕದ ಅಧ್ಯಕ್ಷ ಶಿವಕುಮಾರ್ ಎಂ.ಕೆ., ಯಾದಗಿರಿ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿಯಾಗಿ ಮಂಜುಳಾದೇವಿ, ಯಾದಗಿರಿ ತಾಲ್ಲೂಕು ಅಧ್ಯಕ್ಷೆಯಾಗಿ ಶರಣಮ್ಮ ಮಾಳಿಕೇರಿ, ವಡಿಗೇರಾ ತಾಲ್ಲೂಕು ಅಧ್ಯಕ್ಷ ವೆಂಕಟೇಶ್ ಮಾಸನೋರ್, ಸೈದಾಪುರ ವಲಯ ಅಧ್ಯಕ್ಷರಾಗಿ ಚಂದ್ರಶೇಖರ ಹಿರೇನೂರ್, ಮಹಿಳಾ ಅಧ್ಯಕ್ಷೆಯಾಗಿ ಹೊನ್ನಮ್ಮ ಹೆಗ್ಗಣಗೇರಾ, ಗುರುಮಿಟ್ಕಲ್ ಅಧ್ಯಕ್ಷರಾಗಿ ಬಾಬುಮೀಯಾ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರ ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News