ಯಾದಗಿರಿ | ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವ ಕಾರ್ಯ ಮಹತ್ವದ್ದಾಗಿದೆ : ಶಾಸಕ ಶರಣಗೌಡ ಕಂದಕೂರ

Update: 2024-11-22 15:30 GMT

ಯಾದಗಿರಿ : ಸ್ವಾತಂತ್ರ್ಯ ಹೋರಾಟಗಾರ ಕೊಲ್ಲೂರು ಮಲ್ಲಪ್ಪನವರ ಹೋರಾಟ ನಮ್ಮ ನಾಡಿನ ಯುವ ಹೋರಾಟಗಾರರಲ್ಲಿ ಹಿರಿಮೆಯಾಗಿದೆ ಎಂದು ಗುರುಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅಭಿಪ್ರಾಯಪಟ್ಟರು.

ನಗರದ ಕೊಲ್ಲೂರು ಮಲ್ಲಪ್ಪ ಪದವಿ ಮಹಾವಿದ್ಯಾಲಯ ಕಾಲೇಜಿನಲ್ಲಿ ನಡೆದ 2024- 2025ನೇ ಸಾಲಿನ ಬಿ ಎ, ಬಿಕಾಂ, ಪದವಿ ಪ್ರಥಮ ವರ್ಷದ ಸ್ವಾಗತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುವುದು ಮುಖ್ಯವಲ್ಲ, ಅದನ್ನು ಮುನ್ನಡೆಸುವ ಕಾರ್ಯ ಮಹತ್ವದಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರದ ಯಾವುದೇ ರೀತಿಯ ಅನುದಾನ ಇರದೇ ಇರುವುದರಿಂದ ಸಂಸ್ಥೆ ನಡೆಸಲು ತುಂಬಾ ಕಷ್ಟಕರ ಕೆಲಸ ಆದ್ದರಿಂದ ಮುಂದಿನ ದಿನಗಳಲ್ಲಿ ಸರಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದೆಂದಿಗೂ ಅಮರವಾಗಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಸುಭಾಷ್ ಚಂದ್ರ ಕಟಕಟಿ , ಶ್ರೀರಕ್ಷಾ ಮಹಾ ವಿದ್ಯಾಲಯ ಸಂಸ್ಥೆಗಳ ಅಧ್ಯಕ್ಷ ಕೃಷ್ಣಮೂರ್ತಿ.ಕುಲಕರ್ಣಿ, ಪ್ರಾಂಶುಪಾಲರಾದ ನಿರ್ಮಲಾ, ಸಿನ್ನೂರ್ , ಕೂಲೂರು ಮಲ್ಲಪ್ಪ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಕಿರಣ್ ಎಚ್.ಕೆ. ಇನ್ನಿತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News