ಯಾದಗಿರಿ: ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಉಮೇಶ ಮುದ್ನಾಳ ನೇತೃತ್ವದಲ್ಲಿ ಪ್ರತಿಭಟನೆ

Update: 2024-12-28 14:33 GMT

ಯಾದಗಿರಿ: ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಸೈದಾಪೂರ ಗ್ರಾಮ ಪಂಚಾಯತಿಗೆ ಬರುವ ರಾಂಪೂರ ಕೆ. ಗ್ರಾಮದಲ್ಲಿ ಕಳೆದ ಒಂಬತ್ತು ವರ್ಷಗಳ ಹಿಂದೆಯೇ ನಿರ್ಮಾಣವಾಗಿರುವ ನೀರಿನ ಮೇಲ್ತೊಟ್ಟಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕ (ಆರೋ ಪ್ಲಾಟ್) ಇದುವರೆಗೆ ಉದ್ಘಾಟನೆ ಭಾಗ್ಯ ಕಾಣದೇ ಇರುವುದು ಏಕೆ ಎಂದು ಕರ್ನಾಟಕ ಪ್ರಾದೇಶಿಕ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಪ್ರಶ್ನಿಸಿದ್ದಾರೆ.

ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಅವರು ಕೈಯಲ್ಲಿ ಕಾಲಿಕೊಡ, ಪೊರಕೆ ಹಿಡಿದು ಪ್ರತಿಭಟನೆ ನಡೆಸಿದರು. ರಾಂಪೂರ ಕೆ ಗ್ರಾಮದಲ್ಲಿ ಒಂಬತ್ತು ವರ್ಷಗಳ ಹಿಂದೆಯೇ ನೀರಿನ ಮೇಲ್ತೊಟ್ಟಿ ಶುದ್ಧ ಕುಡಿಯುವ ನೀರಿನ ಘಟಕ (ಆರೋ ಪ್ಲಾಟ್) ನಿರ್ಮಾಣಗೊಂಡು ಸಿದ್ದವಾಗಿದೆ. ಇದುವರೆಗೆ ಉದ್ಘಾಟನೆ ಬಾಗ್ಯ ಕಾಣದೆ ಜನರಿಗೆ ನೀರಿನ ಸಮಸ್ಯೆಯಾಗುತ್ತಿದೆ. ಕೂಡಲೇ ಇದನ್ನು ಜನತೆಗೆ ಬಳಕೆ ಉಪಯೋಗ ಮಾಡಲು ಸಂಬಂದಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕಳೆದ 9 ವರ್ಷಗಳಿಂದ ಗ್ರಾಪಂ, ತಾಪಂ, ಜಿಪಂ ಮತ್ತು ಜಿಲ್ಲಾಡಳಿತ ಭವನದಲ್ಲಿ ಶಾಸಕರ ಸಚಿವರ ಸಭೆಗಳು ನಡೆದರೂ ಸಹ ಈ ಸಮಸ್ಯೆ ಕುರಿತು ಏಕೆ ಚರ್ಚೆ ಆಗಲಿಲ್ಲ. ಒಂದು ಮೇಲ್ತೊಟ್ಟಿ ಶುದ್ಧ ಕುಡಿಯುವ ನೀರಿನ ಘಟಕ (ಆರೋ ಪ್ಲಾಟ್) ನಿರ್ಮಿಸಲು ಯಾರು ಮನವಿ ಮಾಡಿಕೊಂಡಿದ್ದರು. ಮತ್ತು ನಿರ್ಮಾಣ ಮಾಡಿದ ಉದ್ದೇಶವೇನು ಹಣ ಎಷ್ಟು ಬಂತು ಖರ್ಚಾಯಿತು, ಯಾರು ಲೂಟಿ ಮಾಡಿದರು ಎಂಬುದು ಮಾಹಿತಿ ಬೇಕು ಎಂದು ಅವರು ಆಗ್ರಹಿಸಿದರು.

ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾಗಿದ್ದ ಈ ಮೇಲ್ತೊಟ್ಟಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕ (ಆರೋ ಪ್ಲಾಟ್) ಸಾರ್ವಜನಿಕರ ಬಳಕೆ ಮಾಡುವುದು ಬಿಟ್ಟು ಅನಾನುಕೂಲ ಮಾಡಲು ಮುಂದಾಗಿರುವ ಅಧಿಕಾರಿಗಳ ವಿರುದ್ಧ ಇಂದು ಗ್ರಾಮದಲ್ಲಿ ಕೈಯಲ್ಲಿ ಕಾಲಿ ಕೊಡ ಪೊರಕೆ ಹಿಡಿದು ವಿನೂತನ ಪ್ರತಿಭಟನೆ ನಡೆಸಲಾಯಿತು.

ಗ್ರಾಮದಲ್ಲಿ ಜೆಜೆ ಕಾಮಗಾರಿ ಪೂರ್ಣಗೊಳ್ಳದೆ ಹಳ್ಳ ಹಿಡಿದೆ. ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಅಲ್ಲಲ್ಲಿ ಸೋರಿಕೆಯಾಗಿ ಕಲುಶಿತ ನೀರು ಮಿಶ್ರವಾಗಿ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನರು ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಖಾಲಿ ನಿವೇಶನ ಹಾಗೂ ಸಿ.ಸಿ.ರಸ್ತೆ ಚರಂಡಿ ಇಲ್ಲದ ಕಾರಣ ತಗ್ಗು ಗುಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಸ್ಥಾನವಾಗಿ ಮಾರ್ಪಟ್ಟಿದೆ. ಗ್ರಾಮದಲ್ಲಿ ಶಾಲಾ ಕಟ್ಟಡ ಮೇಲೆ ವಿದ್ಯುತ ಕಂಬ ಬಾಗಿ ನಿಂತಿದೆ. ವಿದ್ಯುತ್ ತಂತಿ ಕೆಳಗೆ ಜೋತು ಬಿದ್ದು, ಅನಾಹುತಕ್ಕೆ ಆಹ್ವಾನ ನೀಡುತ್ತಿದೆ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಲ್ಲೇಶ, ಬಸವರಾಜ, ಆಂಜನೇಯ, ಪ್ರಬಣ್ಣಗೌಡ, ಚನ್ನಾರಡ್ಡಿ ಮಾಲಿಪಾಟೀಲ್, ಹಣಮಂತ್ರಾಯ, ಬಸಪ್ಪ, ವಿಜಯ, ಬಂದಪ್ಪ, ಯಲ್ಲಪ್ಪ, ಯಂಕಪ್ಪ, ಮಲ್ಲಮ್ಮ, ಲಕ್ಷ್ಮೀದೇವಿ, ಪದ್ಮ, ಪರೇಮ್ಮ, ಈರಮ್ಮ, ಮಲ್ಲಪ್ಪ, ನಿರಂಜಮ್ಮ, ಮಹಾದೇವಮ್ಮ, ಸಿದ್ದಲಿಂಗಪ್ಪ, ನರಸಪ್ಪ, ಶಾಮರಾಜ, ಶೇಖಪ್ಪ, ಭೀಮರಾಯ, ಮಲ್ಲಪ್ಪ, ಲಚಮರಡ್ಡಿ, ನರಸಮ್ಮ, ರಮೇಶ ಹಣಮತ ಯಂಕಪ್ಪ, ಬಾಬು ಬಶೀರ್, ಪ್ರಜ್ವಲ, ಶಾಲಿಂಬಿ, ಅನಂತಮ್ಮ, ರವಿ, ಲಕ್ಷ್ಮೀ ಮಲ್ಲಣ್ಣಗೌಡ ಯಂಕಪ್ಪ, ಫಾತಿಮಾ, ರಾಜಶೇಖರ, ದೇವಮ್ಮ, ಶಿವಮ್ಮ, ಸಾಬರಡ್ಡಿ, ಬಸಪ್ಪ, ಸೇರಿದಂತೆ ಅನೇಕರು ಗ್ರಾಮಸ್ಥರು ಉಪಸ್ಥಿತರಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News