ಯಾದಗಿರಿ | ಕಿರದಳ್ಳಿ ತಾಂಡಕ್ಕೆ ಕುಡಿಯುವ ನೀರು ಪೂರೈಕೆಗೆ ಮನವಿ

Update: 2024-11-22 14:02 GMT

ಯಾದಗಿರಿ : ಸುರಪುರ ತಾಲ್ಲೂಕಿನ ಕಿರದಳ್ಳಿ ತಾಂಡಾದಲ್ಲಿ ವಾಸಿಸುವ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಜಯ ಕರ್ನಾಟಕ ರಕ್ಷಣಾ ಸೇನೆ ಮುಖಂಡರು ಆಗ್ರಹಿಸಿದರು.

ಹೆಗ್ಗಣದೊಡ್ಡಿ ಗ್ರಾಮ ಪಂಚಾಯತ್ ಕಚೇರಿಗೆ ಆಗಮಿಸಿದ ಸಂಘಟನೆಯ ತಾಲ್ಲೂಕು ರೈತ ಘಟಕದ ಅಧ್ಯಕ್ಷರು ಹಾಗೂ ಮುಖಂಡರು, ಕಿರದಳ್ಳಿ ತಾಂಡಾದಲ್ಲಿ 40 ಕುಟುಂಬಗಳು ವಾಸಿಸುತ್ತಿವೆ. ಆದರೆ ಇಲ್ಲಿ ಐದು ಬೋರವೆಲ್‌ಗಳಿದ್ದರೂ ಅವುಗಳಲ್ಲಿ ಎರಡು ಕೆಟ್ಟು ಅನೇಕ ತಿಂಗಳುಗಳಾದರೂ ರಿಪೇರಿ ಮಾಡಿಲ್ಲ. ಇನ್ನು ಒಂದಕ್ಕೆ ಮೋಟರ್ ಇಳಿಸಿಲ್ಲ,ಇನ್ನುಳಿದ ಎರಡು ಬೋರವೆಲ್‌ಗಳಿದ್ದರೂ ನೀರು ಸರಿಯಾಗಿಲ್ಲ. ಇದರಿಂದ ಎಲ್ಲಾ ಕುಟುಂಬಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕೂಡಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಮತ್ತು ಒಂದು ವಾರದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ಪಿಡಿಓ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ರೈತ ಘಟಕದ ತಾಲ್ಲೂಕು ಅಧ್ಯಕ್ಷ ಧನರಾಜ ರಾಠೋಡ, ಗ್ರಾಮ ಘಟಕದ ಅಧ್ಯಕ್ಷ ರೇಖು ರಾಠೋಡ, ಉಪಾಧ್ಯಕ್ಷ ಜಯರಾಮ ರಾಠೋಡ, ಮಹಿಳಾ ಘಟಕದ ಅಧ್ಯಕ್ಷೆ ಸೀತಾಬಾಯಿ ರಾಠೋಡ, ಮಾನು ಭೀಮಜಿ ನಾಯಕ, ಈರಣ್ಣ ರಾಠೋಡ, ಶಾಣಿಬಾಯಿ ಜಾಧವ, ತಿಪ್ಪಮ್ಮ ಗೋವಿಂದ ಚವ್ಹಾಣ, ಶಾಂತಿಬಾಯಿ ಗುರುನಾಥ ರಾಠೋಡ, ಲಕ್ಷ್ಮೀಬಾಯಿ ಮಂಜು ರಾಠೋಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News