ಯಾದಗಿರಿ | ಅಖಂಡ ಕರ್ನಾಟಕ ರಕ್ಷಣಾ ಸಮಿತಿ ಮಾಡಿದ ಆರೋಪ ಸುಳ್ಳು : ನಿಂಗಪ್ಪ ಕೆಂಗೂರಿ
ಯಾದಗಿರಿ : ಸುರಪುರ ತಾಲೂಕಿನ ಖಾನಾಪುರ ಎಸ್.ಎಚ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಮನೆಗಳ ಜಿಪಿಎಸ್ ಮಾಡಲು ಹಣ ಪಡೆದಿದ್ದಾರೆ ಎಂದು ಅಖಂಡ ಕರ್ನಾಟಕ ರಕ್ಷಣಾ ಸಮಿತಿ ಅಧ್ಯಕ್ಷ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಖಾನಾಪುರ ಎಸ್.ಎಚ್ ಗ್ರಾಮ ಪಂಚಾಯತ್ ಅಧ್ಯಕ್ಷ ನಿಂಗಪ್ಪ ಕೆಂಗೂರಿ ತಿಳಿಸಿದ್ದಾರೆ
ನಗರದ ತಾಲ್ಲೂಕು ಪಂಚಾಯತ್ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ, ಸಂಘದ ಅಧ್ಯಕ್ಷ ದುರುದ್ದೇಶದಿಂದ ನನ್ನ ಮತ್ತು ನಮ್ಮ ಗ್ರಾಮ ಪಂಚಾಯತ್ ಅಭಿವೃಧ್ಧಿ ಅಧಿಕಾರಿಗಳ ವಿರುದ್ಧ ಬ್ಲಾಕ್ ಮೇಲ್ ಮಾಡುವ ಉದ್ಧೇಶ ದಿಂದ ಜಿಪಿಎಸ್ ಮಾಡಲು ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಯಾವುದೇ ಫಲಾನುಭವಿಗಳಿಂದ ನಯಾ ಪೈಸೆ ಹಣ ಪಡೆದಿಲ್ಲ. ಗ್ರಾಮ ಪಂಚಾಯತ್ನಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ದುರುದ್ದೇಶ ದಿಂದ ನನ್ನ ಮತ್ತು ಪಿಡಿಓ ಮೇಲೆ ಆರೋಪ ಮಾಡಿರುವ ಅಖಂಡ ಕರ್ನಾಟಕ ರಕ್ಷಣಾ ಸಮಿತಿ ಅಧ್ಯಕ್ಷರ ಮೇಲೆ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮೊನುದ್ದಿನ್ ಖುರೇಶಿ, ಶಿವನಗವಡ ನವಿಲಗುಡ್ಡ, ಶಿವು ಸ್ವಾಮಿ ಹಿರೇಮಠ, ತಿಪ್ಪಣ್ಣ ಕವಡಿಮಟ್ಟಿ, ಹುಲಗಪ್ಪ ಕೊಂಬಿನ್, ಮುಖಂಡರಾದ ಹಣಮೆಗೌಡ (ದಳಪತಿ) ಪೊಲೀಸ್ ಪಾಟೀಲ್, ಬಸ್ಸಪ್ಪ ಬಂಕಾಪುರ, ದುರ್ಗಪ್ಪ ನಾಯಕ ಗುಡಿಹಾಳ, ದಾವೂದ್ ಖುರೇಶಿ, ಭೀಮಪ್ಪ ಕೊಂಬಿನ್, ವಾಸು ಕೆಂಗುರಿ, ತಿಪ್ಪಣ್ಣ ಬಜೆಂತ್ರಿ, ಮಲ್ಲೇಶಿ ಗುಡಿಹಾಳ, ವೆಂಕಟೇಶ ಗುಡಿಹಾಳ, ಭಾಗನಾಥ ಗುತ್ತೇದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.