ಯಾದಗಿರಿ | ಕರವೇ ಕಚೇರಿಯಲ್ಲಿ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಣೆ

Update: 2024-12-06 12:48 GMT

ಯಾದಗಿರಿ : ನಗರದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ರವರ 68ನೇ ಮಹಾಪರಿನಿರ್ವಾಣ ದಿನದ ನಿಮಿತ್ತ ಬಾಬಾ ಸಾಹೇಬ್ ಅಂಬೇಡ್ಕರ್ ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಟಿ.ಎನ್. ಭೀಮುನಾಯಕ ಮಾತನಾಡಿ, ಅಂಬೇಡ್ಕರ್ ಅವರ ಕೊನೆಯ ಮಾತುಗಳಾದ ನನ್ನ ಜೀವಿತದ ಅವಧಿಯಲ್ಲೇ ನನ್ನ ಜನರು ಈ ದೇಶದ ಆಳುವ ವರ್ಗವಾಗುವುದನ್ನು ನಾನು ನೋಡಬಯಸಿದ್ದೆ, ಎಂದು ಹೇಳಿದರು.

ರಾಜಕೀಯ ಅಧಿಕಾರವನ್ನು ಸಮಾನತೆಯ ಆಧಾರದ ಮೇಲೆ ಇತರರ ಜೊತೆ ಹಂಚಿಕೊಳ್ಳುವುದನ್ನು ನಾನು ಬಯಸಿದ್ದೆ, ಆದರೆ ಅಂತಹ ಸಾಧ್ಯತೆ ನನಗೀಗ ಕಾಣುತ್ತಿಲ್ಲ. ಅದೂ ಅಲ್ಲದೆ ಅಂತಹ ಪ್ರಯತ್ನವನ್ನು ನಾನೇ ಮಾಡೋಣವೆಂದರೆ ನಾನೂ ಕೂಡ ಈಗ ಅನಾರೋಗ್ಯದ ಕಾರಣದಿಂದಾಗಿ ನಿಶ್ಯಕ್ತ ಮತ್ತು ನಿರಾಶನಾಗಿದ್ದೇನೆ, ಅಂಬೇಡ್ಕರರು ತಮ್ಮ ಆಪ್ತಸಹ ಕಾರ್ಯದರ್ಶಿಗಳಿಗೆ ಹೇಳಿದ ಮಾತುಗಳು ನೆನೆದರೆ ಅವರು ದೇಶಕ್ಕಾಗಿ, ಜನ ಸಾಮಾನ್ಯರಿಗಾಗಿ ಪಟ್ಟಂತಹ ಕಷ್ಟಗಳು ಅಷ್ಟಿಷ್ಟಲ್ಲ ಇತಿಹಾಸ ನಾವೂ ನೀವು ಓದಲೇಬೇಕು, ಅಂಬೇಡ್ಕರ್ ಕಂಡಂತಹ ಕನಸನ್ನು ಗೌರವಿಸಿ ಸಂವಿಧಾನವನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬ ಪ್ರಜೆಯು ಶ್ರಮಿಸಬೇಕೆಂದು ನುಡಿದರು.

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷರಾದ ಮಲ್ಲು ಮಾಳಿಕೇರಿ, ಸಂತೋಷ ಕುಮಾರ ನಿರ್ಮಲಕರ್, ಸಾಹೇಬಗೌಡ ನಾಯಕ ಗೌಡಗೇರಾ, ಯಮನಯ್ಯ ಗುತ್ತೇದಾರ, ಅರ್ಜುನ ಪವಾರ, ಹುಲುಗಪ್ಪ ಭಂಜತ್ರಿ, ಸುರೇಶ ಬೆಳಗುಂದಿ, ಅಬ್ದುಲ್ ರಿಯಾಜ್, ಅನೀಲ ದಾಸನಕೇರಿ, ಸೈದಪ್ಪ ಬಾಂಬೆ ಗೌಡಗೇರಾ, ಹಣಮಂತ ದೊರಿ, ರಮೇಶ.ಡಿ.ನಾಯಕ, ಇರ್ಫಾನ್ ಪಟೇಲ್, ಇತರರು ಭಾಗಿಯಾಗಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News