ಯಾದಗಿರಿ | ಲಕ್ಷ್ಮೀನಾರಾಯಣ ನಾಗವಾರ ನಿಧನ ದಲಿತರಿಗೆ ತುಂಬಲಾರದ ನಷ್ಟ : ಮಲ್ಲಿಕಾರ್ಜುನ ಕ್ರಾಂತಿ
ಸುರಪುರ : ನಾಡಿನ ಹಿರಿಯ ದಲಿತ ಹೋರಾಟಗಾರರಲ್ಲಿ ಒಬ್ಬರಾಗಿದ್ದ ಲಕ್ಷ್ಮೀನಾರಾಯಣ ನಾಗವಾರ ಅವರ ನಿಧನದಿಂದ ನಾಡಿನ ದಲಿತ, ಶೋಷಿತ, ಒಬಿಸಿ ಮತ್ತು ಅಲ್ಪಸಂಖ್ಯಾತರರಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಹೇಳಿದ್ದಾರೆ.
ಸಂಘಟನೆ ವತಿಯಿಂದ ನಗರದ ಮಹಾತ್ಮ ಗೌತಮ್ ಬುದ್ಧರ ವೃತ್ತದಲ್ಲಿ ಹಮ್ಮಿಕೊಂಡಿದ್ದ ದಿ.ಲಕ್ಷ್ಮೀನಾರಾಯಣ ನಾಗವಾರ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಗವಾರ ಅವರು ಅನೇಕ ಜನಪರವಾರ ಹೋರಾಟಗಳನ್ನು ನಡೆಸಿ ದೀನ, ದಲಿತ, ಶೋಷಿತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಅಂತವರನ್ನು ಕಳೆದುಕೊಂಡು ನಾಡಿಗೆ ಬಹುದೊಡ್ಡ ನಷ್ಟವುಂಟಾಗಿದೆ ಎಂದರು.
ಸಭೆಯಲ್ಲಿ ಸಂಘದ ತಾಲ್ಲೂಕು ಸಂಚಾಲಕ ಬಸವರಾಜ ದೊಡ್ಮನಿ, ಮುಖಂಡರಾದ ಹಣಮಂತ ಭದ್ರಾವತಿ, ಮಾನಪ್ಪ ಶೆಳ್ಳಗಿ, ಮಲ್ಲಿಕಾರ್ಜುನ ತಳ್ಳಳ್ಳಿ, ಅಪ್ಪಣ್ಣ ಗಾಯಕವಾಡ, ರಾಮಣ್ಣ ಶೆಳ್ಳಗಿ, ಮೂರ್ತಿ ಬೊಮ್ಮನಹಳ್ಳಿ, ಖಾಜಾಹುಸೇನ ಗುಡಗುಂಟಿ, ಜೆಟ್ಟೆಪ್ಪ ನಾಗರಾಳ, ಗೌಸ್ ಸಾಹುಕಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.