ಯಾದಗಿರಿ | ಅಕ್ರಮ ಮರಳು ಸಾಗಾಟ ತಡೆಯಲು ಜಯಕರ್ನಾಟಕ ಜನಪರ ವೇದಿಕೆ ಆಗ್ರಹ
ಯಾದಗಿರಿ : ಸುರಪುರ ನಗರದಲ್ಲಿನ ಅಕ್ರಮ ಮರಳು ಸಾಗಾಣಿಕೆ ತಡೆಯುವಂತೆ ಆಗ್ರಹಿಸಿ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ಮುಖಂಡರು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ರವಿ ನಾಯಕ ಬೈರಿಮರಡಿ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಬರುವ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಸಾರ್ವಜನಿಕ ಸೌಚಾಲಯ ನಿರ್ಮಿಸಲು ಹಾಗೂ ನಗರ ಸಭೆ ವ್ಯಾಪ್ತಿಯಲ್ಲಿ ಬರುವ ಹಸನಾಪುರ ಸೀಮಾಂತರದಲ್ಲಿನ ಸರ್ವೇ ನಂಬರ್ 186 ರಲ್ಲಿ ಅಕ್ರಮ ಮರಳು ಸಾಗಾಣಿಕೆ (ಗಣಿಗಾರಿಕೆ) ನಡೆಯುತ್ತಿದ್ದು ಅದನ್ನು ತಡೆ ಹಿಡಿಯುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕು ಅಧ್ಯಕ್ಷ ಗೋಪಾಲ ನಾಯಕ ಸತ್ಯಂಪೇಟೆ ಹಾಗೂ ಪದಾಧಿಕಾರಿಗಳಾದ ವೆಂಕಟೇಶ ನಾಯಕ ಸುಬೇದಾರ್,ದೇವು ನಾಯಕ ಜಾಲಿಬೆಂಚಿ,ರಾಘವೇಂದ್ರ ಲಕ್ಷ್ಮೀಪುರ, ರವಿ ಕಿರಣ ಸಿದ್ದಾಪುರ, ಮೌನೇಶ್ ದಳಪತಿ,ಬಸವರಾಜ ಪಾಟೀಲ್ ಶಖಾಪುರ,ಬಸ್ಸಪ್ಪ ಯಾಳವಾರ,ದೊಡ್ಡ ಮರೆಪ್ಪ,ದೇವು ನಾಯಕ ಕಲ್ಲೋಡಿ,ಕುಮಾರ ಲಿಂಗದಹಳ್ಳಿ,ಕೃಷ್ಣ ಸತ್ಯಂಪೇಟ,ಶಿವು ಮೂರ್ತಿ ದೀವಳಗುಡ್ಡ, ದೇವು ಕುಂಬಾರ ಜಾಲಿಬೆಂಚಿ,ಲಕ್ಷ್ಮಣ ನಾಯಕ ಡೊಣ್ಣಿಗೇರಾ,ಭೀಮಣ್ಣ ನಾಯಕ ಲಕ್ಷ್ಮೀಪುರ,ಚಂದ್ರಶೇಖರ,ಸಣ್ಣ ಅಯ್ಯಪ್ಪ ಬೈರಿಮರಡಿ, ಮಹೆಬೂಬಸಾಬ್ ಸೇರಿದಂತೆ ಅನೇಕರು ಇದ್ದರು.