ಯಾದಗಿರಿ | ದ್ವಿತೀಯ ಜಾಂಬೋರೇಟ್ ಪೂರ್ವಭಾವಿ ಸಭೆ; ಲಾಂಛನ ಬಿಡುಗಡೆ
ಯಾದಗಿರಿ : ವಿಶ್ವದ ಹಲವಾರು ದೇಶಗಳಲ್ಲಿ ಮಕ್ಕಳ ಅಭ್ಯದಯಕ್ಕಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಹಲವಾರು ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಮಕ್ಕಳಲ್ಲಿ ಶಿಸ್ತು, ಸಂಯಮ ಹಾಗೂ ದೇಶಭಕ್ತಿಯನ್ನು ಉದ್ವಿಪನೆಗೊಳಿಸುತ್ತಿದೆ ಎಂದು ಭಾರತ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಪ್ರಧಾನ ಆಯುಕ್ತ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಹೇಳಿದರು.
ಯಾದಗಿರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ಜಾಂಬೋರೇಟ್ ಪೂರ್ವಭಾವಿ ಸಭೆಯಲ್ಲಿ ಲಾಂಛನ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಅಂತರಾಷ್ಟ್ರೀಯ ಜಾಂಬೋ ರೇಟ್ ಬೀದರ್ ದಲ್ಲಿ ಕಲ್ಯಾಣ ಕರ್ನಾಟಕ ಮೊದಲ ಜಾಂಬೋರೇಟ್ ನಡೆದಿದ್ದು, ಯಾದಗಿರಿಯ ಎರಡನೇ ಜಾಂಬೋರೇಟ್ ಈ ತಿಂಗಳ 17 ರಿಂದ 21ರವರೆಗೆ ನಡೆಯಲಿದ್ದು, ಸುಮಾರು 3,500 ಮಕ್ಕಳು ಭಾಗವಹಿಸುತ್ತಿದ್ದು, ಯಾದಗಿರಿ ಜಿಲ್ಲೆಯ ಜನ ಈ ಜಾಂಬೋ ರೇಟ್ ಅನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಜಿಲ್ಲಾ ಸಂಸ್ಥೆಯ ಅಧ್ಯಕ್ಷ ಸುರೇಶ ಸಜ್ಜನ್, ಸ್ಕೌಟ್ಸ್ ಗೇಟ್ಸ್ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ರಾಘವೇಂದ್ರ ಅಳ್ಳಳ್ಳಿ, ಸ್ಕೌಟ್ಸ್ ಆಯುಕ್ತ ಪ್ರೋ.ಸಿ.ಎಂ ಪಟ್ಟೇದಾರ ಉಪಸ್ಥಿತರಿದ್ದರು. ಶಹಪುರ ಸಂಘಟನೆಯ ಕಾರ್ಯದರ್ಶಿ ಬಸವರಾಜ್ ಗೋಗಿ ಸ್ವಾಗತಿಸಿದರು. ಕಲ್ಯಾಣಿ ಕರ್ನಾಟಕ ಸ್ಕೌಟ್ಸ್ ಗೇಟ್ಸ್ ಪ್ರಭಾರಿ ಶ್ರೀಮತಿ ಮಲ್ಲೇಶ್ವರಿ ಜುಜೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಹೆಚ್ಚುವರಿ ಎಸ್.ಪಿ ಧರಣೇಶ ಎಸ್.ಪಿ ಉಪಸ್ಥಿತರಿದ್ದರು.